
ಪ್ರಜಾವಾಣಿ ವಾರ್ತೆವರ್ಗಾವಣೆ
ಹೊಸಪೇಟೆ: ಹೊಸಪೇಟೆ ಡಿವೈಎಸ್‌ಪಿ ಮಂಜುನಾಥ ತಳವಾರ್ ಮತ್ತು ಹರಪನಹಳ್ಳಿ ಡಿವೈಎಸ್‌ಪಿ ವೆಂಕಟಪ್ಪ ನಾಯಕ ಅವರನ್ನು ಕ್ರಮವಾಗಿ ಸಿಐಡಿ ಮತ್ತು ರಾಜ್ಯ ಗುಪ್ತವಾರ್ತೆ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.
ಎಎನ್‌ಟಿಎಫ್‌ಗೆ ವರ್ಗಾವಣೆಗೊಂಡಿದ್ದ ವಿಶ್ವನಾಥ ರಾವ್ ಕುಲಕರ್ಣಿ ಅವರನ್ನು ಹೊಸಪೇಟೆ ಡಿವೈಎಸ್‌ಪಿ ಹಾಗೂ ಬಳ್ಳಾರಿಯ ಸಿಸಿಪಿಎಸ್ ಡಿವೈಎಸ್‌ಪಿ ಸಂತೋಷ್ ಚವ್ಹಾಣ್ ಅವರನ್ನು ಹರಪನಹಳ್ಳಿ ಡಿವೈಎಸ್‌ಪಿ ಹುದ್ದೆಗೆ ನಿಯೋಜಿಸಿ ಡಿಜಿ ಮತ್ತು ಐಜಿಪಿ ಅವರು ಆದೇಶ ಹೊರಡಿಸಿದ್ದಾರೆ.