ADVERTISEMENT

ಹೂವಿನಹಡಗಲಿ | ‘ಕಿತ್ತೂರು ಚನಮ್ಮ ಸೊಸೈಟಿಗೆ ₹96.81 ಲಕ್ಷ ಲಾಭ’

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 4:26 IST
Last Updated 29 ಆಗಸ್ಟ್ 2025, 4:26 IST
ಹೂವಿನಹಡಗಲಿ ಕಿತ್ತೂರು ಚನ್ನಮ್ಮ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು
ಹೂವಿನಹಡಗಲಿ ಕಿತ್ತೂರು ಚನ್ನಮ್ಮ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು   

ಹೂವಿನಹಡಗಲಿ: ‘ಕಿತ್ತೂರು ರಾಣಿ ಚನ್ನಮ್ಮ ಕ್ರೆಡಿಟ್ ಕೋ ಆಪರೇಟಿವ್ ಸೊಟೈಟಿ ಕಳೆದ ಆರ್ಥಿಕ ವರ್ಷದಲ್ಲಿ ₹17.40 ಕೋಟಿ ಆರ್ಥಿಕ ವಹಿವಾಟು ನಡೆಸಿ ₹96,81,440 ನಿವ್ವಳ ಲಾಭ ಗಳಿಸಿದೆ’ ಎಂದು ಅಧ್ಯಕ್ಷ ಪಿ.ವಿಜಯಕುಮಾರ್ ಹೇಳಿದರು.

ಪಟ್ಟಣದ ಗವಿಮಠದಲ್ಲಿ ಭಾನುವಾರ ಆಯೋಜಿಸಿದ್ದ ಸೊಸೈಟಿಯ 25ನೇ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಸದಸ್ಯರ ಸಹಕಾರ ಹಾಗೂ ಗ್ರಾಹಕರು ಉತ್ತಮ ರೀತಿಯಲ್ಲಿ ವ್ಯವಹಾರ ನಡೆಸುತ್ತಿರುವುದರಿಂದ ಸೊಸೈಟಿ ಪ್ರತಿವರ್ಷವೂ ಲಾಭ ಗಳಿಸುತ್ತಿದೆ. ಆರ್ಥಿಕ ಶಿಸ್ತು ಕಾಪಾಡುವ ದಿಸೆಯಲ್ಲಿ ವಸೂಲಾತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಸದಸ್ಯರು ಸೊಟೈಟಿಯಲ್ಲಿನ ಸಾಲ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

ADVERTISEMENT

ಉಪಾಧ್ಯಕ್ಷ ಕೋಡಿಹಳ್ಳಿ ಕೊಟ್ರೇಶ ಮಾತನಾಡಿ, ನಿಶ್ಚಿತ ಠೇವಣಿಗಳ ಮೇಲೆ ಆಕರ್ಷಕ ಬಡ್ಡಿ ನೀಡಲಾಗುತ್ತಿದೆ. ಸಮಾಜದವರು ಸೊಸೈಟಿಯಲ್ಲಿ ಠೇವಣಿ ಇರಿಸಿ, ಆರ್ಥಿಕ ವಹಿವಾಟು ನಡೆಸಬೇಕು’ ಎಂದು ಮನವಿ ಮಾಡಿದರು.

‘ಸುಸ್ತಿದಾರರಲ್ಲಿ ಕೆಲವರಿಗಷ್ಟೇ ನೋಟಿಸ್ ನೀಡಿ ತಾರತಮ್ಯ ಮಾಡಲಾಗುತ್ತಿದೆ. ವಸೂಲಾತಿಯಲ್ಲಿ ಎಲ್ಲರಿಗೂ ಒಂದೇ ಮಾನದಂಡ ಅನುಸರಿಸಬೇಕಿದ್ದು, ಆಡಳಿತ ಮಂಡಳಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಸದಸ್ಯರು ಒತ್ತಾಯಿಸಿದರು.

ವಿಶೇಷ ಆಹ್ವಾನಿತ ಟಿ.ಕೆ.ಬ್ಯಾಡಗಿ ಬ್ಯಾಡಗಿ ಉದ್ಘಾಟಿಸಿದರು. ನಿರ್ದೇಶಕರಾದ ಕಲ್ಪನಾ ಪಾಟೀಲ್, ಸುಶೀಲ ಹಣ್ಣಿ, ಎಸ್.ದೂದನಾಯ್ಕ, ಪರಶೆಟ್ಟಿ ಶಿವಕುಮಾರ್, ಹೊಳೆಯಾಚಿ ಸಿದ್ದೇಶ, ಬಿ.ನೀಲನಗೌಡ, ನಿಂಗಪ್ಪ, ವಿಶೇಷ ಆಹ್ವಾನಿತ ಪಾಟೀಲ್ ಕರಿವೀರನಗೌಡ, ಪಂಚಮಸಾಲಿ ನೌಕರರ ಸಂಘದ ಗೌರವ ಅಧ್ಯಕ್ಷ ಬಸೆಟ್ಟಿ ಪ್ರಕಾಶ, ಪ್ರಭಾರಿ ಮುಖ್ಯ ಕಾರ್ಯನಿರ್ವಾಹಕ ಕೆ.ಬಸವರಾಜ, ವ್ಯವಸ್ಥಾಪಕ ಅನ್ನದಾನಗೌಡ ಪಾಟೀಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.