ADVERTISEMENT

ದೇವಾಲಯಗಳ ತವರೂರು ಕೊಟ್ಟೂರು

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 6:18 IST
Last Updated 27 ಸೆಪ್ಟೆಂಬರ್ 2022, 6:18 IST
ಅಂಬಳಿ ಕಲ್ಲೇಶ್ವರಸ್ವಾಮಿ ದೇವಸ್ಧಾನ
ಅಂಬಳಿ ಕಲ್ಲೇಶ್ವರಸ್ವಾಮಿ ದೇವಸ್ಧಾನ   

ಕೊಟ್ಟೂರು : ದೇವಾಲಯಗಳ ತವರೂರು ಎಂದೇ ಕೊಟ್ಟೂರು ತಾಲ್ಲೂಕು ಖ್ಯಾತಿ ಗಳಿಸಿದೆ. ಪ್ರವಾಸಿಗರನ್ನು ಕೈಬೀಸಿ ಕರೆಯುವ ಸುಂದರ ಪುರಾತನ ದೇವಸ್ಧಾನಗಳು ತಾಲ್ಲೂಕಿನಾದ್ಯಾಂತ ಇವೆ.

ಕೊಟ್ಟೂರಿನಲ್ಲಿಯೇ ಶ್ರೀಗುರುಬಸವೇಶ್ವರಸ್ವಾಮಿಗೆ ಐದು ದೇವಸ್ಧಾನಗಳಿವೆ. ಹಿರೇಮಠ, ಗಚ್ಚಿನ ಮಠ, ತೊಟ್ಟಿಲು ಮಠ, ಮೂರ್ಕಲ್ ಮಠ, ಮರಿಕೊಟ್ಟೂರೇಶ್ವರ ಮಠಗಳನ್ನು ಹೊಂದಿರುವ ಶ್ರೀಸ್ವಾಮಿಯ ರಥೋತ್ಸವ ಹಾಗೂ ಕಾರ್ತಿಕೋತ್ಸವಕ್ಕೆ ಅಸಂಖ್ಯಾತ ಭಕ್ತರು ಪಾದಯಾತ್ರೆಯಲ್ಲಿ ಆಗಮಿಸುವುದು ಇಲ್ಲಿನ ಮತ್ತೊಂದು ವಿಶೇಷ.

ವೀರಶೈವ ಪಂಚಪೀಠಗಳಲ್ಲಿ ಒಂದಾದ ಶ್ರೀ ಉಜ್ಜಯಿನಿ ಸದ್ಧರ್ಮ ಪೀಠ ತಾಲ್ಲೂಕಿನಲ್ಲಿರುವುದು ಹಿರಿಮೆ. ಶ್ರೀಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವದ ಮಾರನೆ ದಿನದಂದು ದಕ್ಷಿಣ ಭಾರತದಲ್ಲಿಯೇ ವಿಶಿಷ್ಠವಾಗಿರುವ ದೇವಸ್ಧಾನದ ಶಿಖರಕ್ಕೆ ತೈಲಾಭಿಷೇಕ ನಡೆಯುವುದನ್ನು ಇಲ್ಲಿ ಕಾಣಬಹುದಾಗಿದೆ. ಅಲ್ಲದೇ ದೇವಸ್ಧಾನವು ಅತ್ಯಂತ ಸಂದರವಾದ ಕೆತ್ತನೆಗಳಿಂದ ಕೂಡಿದ್ದು, ‘ಹಂಪಿಯನ್ನು ಹೊರನೋಡು ಉಜ್ಜಯಿನಿಯನ್ನು ಒಳನೋಡು’ ಎಂಬ ಮಾತು ನಿಜಕ್ಕೂ ಅರ್ಥಪೂರ್ಣವಾಗಿದೆ.

ADVERTISEMENT

ತಾಲ್ಲೂಕಿನ ಅಂಬಳಿ ಗ್ರಾಮದ ಕಲ್ಯಾಣ ಚಾಲುಕ್ಯ ಅರಸ ವಿಕ್ರಮಾದಿತ್ಯನ ಕಾಲದಲ್ಲಿ ನಿರ್ಮಾಣಗೊಂಡ ಕಲ್ಲೇಶ್ವರಸ್ವಾಮಿ ದೇವಸ್ಧಾನವು ಸುಂದರವಾದ ಸಭಾ ಮಂಟಪ, ಮುಖ ಮಂಟಪ ಹೊಂದಿದ್ದು, ಸೂಕ್ಷ್ಮ ಅಲಂಕಾರಿಕ ಕೆತ್ತನೆಗಳನ್ನು ಗಮನ ಸೆಳೆಯುತ್ತದೆ.ತಾಲ್ಲೂಕಿನ ಗಾಣಗಟ್ಟೆ ಮಾಯಮ್ಮ ದೇವಸ್ಧಾನವು ಸುಂದರವಾದ ರಾಜಗೋಪುರವನ್ನು ಹೊಂದಿದ್ದು, ನೋಟುಗಳಿಂದ ಅಲಂಕೃತಳಾದ ಮಾಯಮ್ಮ ದೇವಿಯು ‘ದುಡ್ಡಿನ ದೇವತೆ’ಯಂದೇ ಈ ಭಾಗದಲ್ಲಿ ಪ್ರಸಿದ್ಧಿ.

ಚಿರಬಿ ಗ್ರಾಮದ ಶ್ರೀ ಮೂಗಬಸವೇಶ್ವರಸ್ವಾಮಿ ದೇವಸ್ಧಾನವು ಗ್ರಾಮದ ಹೊರವಲಯದಲ್ಲಿ ಸುಂದರವಾದ ಗದ್ದೆ, ತೋಟಗಳ ಮಧ್ಯೆ ಕಂಗೊಳಿಸುತ್ತಿದೆ.ಹೀಗೆ ನೂರಾರು ಮಠ, ಮಂದಿರಗಳನ್ನು ಹೊಂದಿರುವ ಕೊಟ್ಟೂರು ತಾಲ್ಲೂಕು ವಿಜಯನಗರ ಜಿಲ್ಲೆಯಲ್ಲಿಯೇ ವಿಶಿಷ್ಠ ಸ್ಧಾನವನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.