ADVERTISEMENT

ಸೋರಿದ ಶಾಲಾ ಕೊಠಡಿ: ಪ್ಲಾಸ್ಟಿಕ್ ಹಾಳೆ ಹೊದಿಕೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2023, 13:27 IST
Last Updated 25 ಜುಲೈ 2023, 13:27 IST
ಹರಪನಹಳ್ಳಿ ತಾಲ್ಲೂಕಿನ ಕೆ.ಕಲ್ಲಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಕೊಠಡಿಗಳು ಸೋರುವುದನ್ನು ತಡೆಯಲು ಎಸ್.ಡಿ.ಎಂ.ಸಿ ಸಮಿತಿಯಿಂದ ಮೇಲ್ಛಾವಣಿಗೆ ಪ್ಲಾಸ್ಟಿಕ್ ಹಾಳೆ ಹೊದಿಸಲಾಯಿತು
ಹರಪನಹಳ್ಳಿ ತಾಲ್ಲೂಕಿನ ಕೆ.ಕಲ್ಲಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಕೊಠಡಿಗಳು ಸೋರುವುದನ್ನು ತಡೆಯಲು ಎಸ್.ಡಿ.ಎಂ.ಸಿ ಸಮಿತಿಯಿಂದ ಮೇಲ್ಛಾವಣಿಗೆ ಪ್ಲಾಸ್ಟಿಕ್ ಹಾಳೆ ಹೊದಿಸಲಾಯಿತು   

ಹರಪನಹಳ್ಳಿ: ಮಳೆಗೆ ತಾಲ್ಲೂಕಿನ ಮೂರು ಮನೆಗಳಿಗೆ ಹಾನಿಯಾಗಿದೆ. ಪಟ್ಟಣದ ಹೊಸಪೇಟೆ ರಸ್ತೆ ಸ್ಟೆಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಮೇಲ್ಛಾವಣಿಗೆ ಹೊದಿಸಿದ್ದ ಪ್ಲೆವುಡ್ ಮುರಿದು ಬಿದ್ದಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ.

ಜಂಬುಲಿಂಗನಹಳ್ಳಿಯಲ್ಲಿ ಭಾಗ್ಯಮ್ಮ, ಹಳ್ಳಿಕೆರೆಯಲ್ಲಿ ಪರಶುರಾಮಪ್ಪ, ನಂದಿಬೇವೂರು ಗಂಗಮ್ಮ ಅವರ ಮನೆಗಳಿಗೆ ಹಾನಿಯಾಗಿದೆ. ತಾಲ್ಲೂಕಿನ ಕೆ.ಕಲ್ಲಹಳ್ಳಿ ಸರ್ಕಾರಿ ಶಾಲೆಯ 8 ಕೊಠಡಿಗಳು ಶಿಥಿಲಗೊಂಡು ಸೋರುತ್ತಿವೆ.

1ರಿಂದ 7ನೇ ತರಗತಿ ನಡೆಯುವ ಶಾಲೆಯಲ್ಲಿ 190 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಶಾಲಾ ಕೊಠಡಿಗಳು ಸೋರುತ್ತಿರುವ ಪರಿಣಾಮ, ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಪದಾಧಿಕಾರಿಗಳು ಸ್ವಂತ ಹಣದಿಂದ ಎಲ್ಲ ಕೊಠಡಿಗಳ ಮೇಲೆ ಪ್ಲಾಸ್ಟಿಕ್ ಹಾಳೆ ಅಳವಡಿಸಿ, ಕೊಠಡಿಗಳಲ್ಲಿ ನೀರು ಸೋರದಂತೆ ವ್ಯವಸ್ಥೆ ಮಾಡಿದ್ದಾರೆ.

ADVERTISEMENT
ಹರಪನಹಳ್ಳಿ ನಂದಿಬೇವೂರು ಗ್ರಾಮದಲ್ಲಿ ಗಂಗಮ್ಮ ಅವರ ಮನೆಯ ಗೋಡೆ ಕುಸಿದಿರುವುದು
ಹರಪನಹಳ್ಳಿ ತಾಲ್ಲೂಕು ಹಳ್ಳಿಕೆರೆಯಲ್ಲಿ ಪರಶುರಾಮಪ್ಪ ಅವರ ಮನೆ ಗೋಡೆ ಬಿದ್ದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.