
ಹೊಸಪೇಟೆ (ವಿಜಯನಗರ): ಹೂವಿನಹಡಗಲಿಯ ವಲಯ ಅರಣ್ಯ ಅಧಿಕಾರಿ ಎಂ.ರೇಣುಕಮ್ಮ, ಹಗರಿಬೊಮ್ಮನಹಳ್ಳಿ ಜೆಸ್ಕಾಂನ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಭಾಸ್ಕರ್ ಸೇರಿ ಕೆಲವು ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಬುಧವಾರ ಬೆಳಿಗ್ಗೆ ದಾಳಿ ನಡೆಸಿ, ಪರಿಶೀಲಿಸಿದರು.
ಬಳ್ಳಾರಿ ಜಿಲ್ಲೆ ಸಂಡೂರಿನ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ರವಿ ಅವರ ಕಚೇರಿ, ಬಳ್ಳಾರಿಯ ಮನೆ ಮೇಲೆ ಸಹ ದಾಳಿ ನಡೆದಿದೆ.
ಸಿಎಂ ಪದಕ ಪಡೆದಿದ್ದರು: ಹೂವಿನಹಡಗಲಿಯ ಆರ್‌ಎಫ್‌ಒ ಎಂ. ರೇಣುಕಮ್ಮ ಅವರು ಕೂಡ್ಲಿಗಿಯಲ್ಲಿ ಅರಣ್ಯಾಧಿಕಾರಿಯಾಗಿದ್ದ ವೇಳೆ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯ ಸೇವೆಗಾಗಿ ಕಳೆದ ವರ್ಷ ಮುಖ್ಯಮಂತ್ರಿ ಪದಕ ಪಡೆದಿದ್ದರು. ಇವರ ಪತಿ ಮಲ್ಲಪ್ಪ ಹರಪನಹಳ್ಳಿಯಲ್ಲಿ ವಲಯ ಅರಣ್ಯಾಧಿಕಾರಿ ಆಗಿದ್ದಾರೆ.
‘ಮನೆ ಶೋಧದ ವೇಳೆ 150 ಗ್ರಾಂ. ಚಿನ್ನ, ಲಕ್ಷಕ್ಕಿಂತ ಹೆಚ್ಚು ನಗದು, ಸ್ಕಾರ್ಪಿಯೊ ವಾಹನ, ಒಂದು ಕಾರು, ಎರಡು ಬೈಕ್ ಹೊಂದಿರುವುದು ಪತ್ತೆಯಾಗಿದೆ. ಕೊಪ್ಪಳ ಸಮೀಪ ಲಿಂಗದಹಳ್ಳಿಯಲ್ಲಿ 6 ಎಕರೆ ತೋಟ ಹಾಗೂ ಮನೆ, ಗಂಗಾವತಿ ಸಮೀಪದ ಸಂಗಾಪುರದ ವಿನಾಯಕ ಲೇಔಟ್‌ನಲ್ಲಿ ಎರಡು ಮನೆ, ಒಂದು ನಿವೇಶನ ಹೊಂದಿದ್ದಾರೆ. ಶೋಧ ಕಾರ್ಯ ಮುಂದುವರಿದಿದ್ದು ದಾಖಲೆಗಳ ಆಧಾರದಲ್ಲಿ ತನಿಖೆ ನಡೆಸಲಾಗುತ್ತಿದೆ’ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.