ADVERTISEMENT

ಹೊಸಪೇಟೆ: ಗಣಿ ಎಂಜಿನಿಯರ್‌ ಸಂಘಕ್ಕೆ ಮಧುಸೂದನ್‌ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2021, 15:37 IST
Last Updated 21 ಆಗಸ್ಟ್ 2021, 15:37 IST
ಹೊಸಪೇಟೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಗಣಿ ಎಂಜಿನಿಯರ್ಸ್‌ ಸಂಘದ 32ನೇ ಅಧ್ಯಕ್ಷರಾಗಿ ಆಯ್ಕೆಯಾದ ಕೆ. ಮಧುಸೂದನ್‌ (ಬಲಬದಿ) ಅವರಿಗೆ ನಿಕಟಪೂರ್ವ ಅಧ್ಯಕ್ಷ ಸಂಜಯ್‌ ಪಟ್ನಾಯಕ್‌ ಅಭಿನಂದಿಸಿದರು
ಹೊಸಪೇಟೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಗಣಿ ಎಂಜಿನಿಯರ್ಸ್‌ ಸಂಘದ 32ನೇ ಅಧ್ಯಕ್ಷರಾಗಿ ಆಯ್ಕೆಯಾದ ಕೆ. ಮಧುಸೂದನ್‌ (ಬಲಬದಿ) ಅವರಿಗೆ ನಿಕಟಪೂರ್ವ ಅಧ್ಯಕ್ಷ ಸಂಜಯ್‌ ಪಟ್ನಾಯಕ್‌ ಅಭಿನಂದಿಸಿದರು   

ಹೊಸಪೇಟೆ (ವಿಜಯನಗರ): ರಾಷ್ಟ್ರೀಯ ಗಣಿ ಎಂಜಿನಿಯರ್ಸ್‌ ಸಂಘದ 32ನೇ ಅಧ್ಯಕ್ಷರಾಗಿ ಕೆ. ಮಧುಸೂದನ್‌ ಆಯ್ಕೆಯಾಗಿದ್ದಾರೆ.

ಶನಿವಾರ ನಗರದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರನ್ನು ಆಯ್ಕೆ ಮಾಡಲಾಯಿತು.

ಮಧುಸೂದನ ಮಾತನಾಡಿ, ‘ರಾಷ್ಟ್ರೀಯ ಮಟ್ಟದಲ್ಲಿ ಕೌಶಲ ತರಬೇತಿ ಹೊಂದಿದ ಯುವಕರನ್ನು ಗುರುತಿಸಿ, ಅವರಿಗೆ ಇನ್ನೂ ಉತ್ತಮವಾದ ತರಬೇತಿಯನ್ನು ನೀಡಿ ಗಣಿಗಾರಿಕೆ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲಾಗುವುದು. ವಿಶ್ವಕ್ಕೆ ಮಾದರಿಯಾಗುವ ರೀತಿಯಲ್ಲಿ ಗಣಿಗಾರಿಕೆ ಕ್ಷೇತ್ರದಲ್ಲಿ ಕೆಲಸ ಮಾಡಲಾಗುವುದು’ ಎಂದರು.

ADVERTISEMENT

‘ಗಣಿ ಉದ್ಯಮವು ಇತ್ತೀಚಿಗೆ ಬಹಳ ಪ್ರಾಮುಖ್ಯತೆ ಪಡೆದಿದೆ. ವೈಜ್ಞಾನಿಕ ರೀತಿಯಲ್ಲಿ ಗಣಿಗಾರಿಕೆ ಮಾಡಬೇಕಾದ ಅನಿವಾರ್ಯತೆ ಇದೆ’ ಎಂದು ನಿಕಟಪೂರ್ವ ಅಧ್ಯಕ್ಷ ಸಂಜಯ್ ಪಟ್ನಾಯಕ್‌ ತಿಳಿಸಿದರು.
ಕಾರ್ಯದರ್ಶಿ ಎಂ. ನರಸಯ್ಯ, ಉಪಾಧ್ಯಕ್ಷ ಒ.ಪಿ.ಗುಪ್ತ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕ ಕೆ.ಎ. ಮಹಾವೀರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.