
ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಮಾಲವಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ನಂದಿಹಳ್ಳಿ ಹುಸೇನ್ ಸಾಹೇಬ್, ಉಪಾಧ್ಯಕ್ಷರಾಗಿ ಬಣವಿಕಲ್ಲು ಪತ್ರೆಪ್ಪ ಅವಿರೋಧ ಆಯ್ಕೆಯಾದರು.
ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸೋಮವಾರ ನಡೆದ ಚುನಾವಣೆಯಲ್ಲಿ ತಲಾ ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ನಡೆಯಿತು. ಸಂಘದಲ್ಲಿ 13 ನಿರ್ದೇಶಕರಿದ್ದಾರೆ.
ಮುಖಂಡರಾದ ಹ್ಯಾಳ್ಯಾದ ಚನ್ನಬಸಪ್ಪ, ನರೇಗಲ್ ಮಲ್ಲಿಕಾರ್ಜುನ, ಚಿನಿವಾಲರ ಈಶಪ್ಪ, ರೆಡ್ಡಿ ಸುರೇಶ್, ಸಂಘದ ನಿಕಟ ಪೂರ್ವ ಅಧ್ಯಕ್ಷ ಜೆ.ಎಸ್.ಕೊಟ್ರೇಶ್, ನಿರ್ದೇಶಕರಾದ ಎಸ್.ಎಂ.ವೀರಮ್ಮ, ಕೆ.ಪಿ.ನೂರ್‌ಜಾನ್, ಕಾಳಿ ರೇವಣಸಿದ್ದಪ್ಪ, ಡೊಕ್ಕಿ ಶಿವಪ್ಪ, ಹಣಗಿ ಚಂದ್ರಪ್ಪ, ಕೆ.ಕೋಟೆಪ್ಪ, ಬೆಳಗಿ ಬಸವರಾಜ, ಬಾವಿಹಳ್ಳಿ ಸಣ್ಣ ರಾಜಾಸಾಹೇಬ್, ಮಣಿಗಾರ ಗೋಣೆಪ್ಪ, ರೆಡ್ಡಿ ಮಲ್ಲಿಕಾರ್ಜುನ, ಮುಖ್ಯ ಕಾರ್ಯನಿರ್ವಾಹಕ ಕೆ.ಮಲ್ಲಿಕಾರ್ಜುನ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.