ADVERTISEMENT

ಬಾಲಕಿ ಪುಸಲಾಯಿಸಿ ಮದುವೆ, ನಂತರ ಕೊಲೆ; ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 22:07 IST
Last Updated 8 ಆಗಸ್ಟ್ 2025, 22:07 IST
ಮಂಜುನಾಥ
ಮಂಜುನಾಥ   

ಪ್ರಜಾವಾಣಿ ವಾರ್ತೆ

ಹೊಸಪೇಟೆ (ವಿಜಯನಗರ): 17 ವರ್ಷದ ಬಾಲಕಿಯನ್ನು ಪ್ರೀತಿಸಿ, ಮದುವೆಯಾಗಿ, ಬಳಿಕ ಆಕೆಯನ್ನು ಕೊಲೆ ಮಾಡಿ ಹೂತು ಹಾಕಿದ ಘಟನೆ ಇಲ್ಲಿ ನಡೆದಿದೆ.

‘ಕೃತ್ಯದ ಸಂಬಂಧ ಆರೋಪಿಗಳಾದ ಮಂಜುನಾಥ, ಆತನ ತಾಯಿ ಲಕ್ಷ್ಮಿ, ಸ್ನೇಹಿತರಾದ ತರುಣ್ ಮತ್ತು ಅಕ್ಬರ್ ಅವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. 

ADVERTISEMENT

‘ನೇಕಾರ ಕಾಲೊನಿ ನಿವಾಸಿ ಮಂಜುನಾಥ, 4 ತಿಂಗಳ ಹಿಂದೆ ಬಾಲಕಿಯನ್ನು ವಿವಾಹವಾಗಿದ್ದ. ಬಳಿಕ ಈತ ಮತ್ತು ಆತನ ತಾಯಿ ಲಕ್ಷ್ಮಿ, ಬಾಲಕಿಗೆ ಕಿರುಕುಳ ನೀಡತೊಡಗಿದರು. ಎರಡೂವರೆ ತಿಂಗಳ ಹಿಂದೆ ಬಾಲಕಿ ಕೊಂದ ಮಂಜುನಾಥ, ಬೈಕ್‌ನಲ್ಲಿ ಶವ ಸಾಗಿಸಿ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಸೇತುವೆ ಬಳಿ ಹೂತಿದ್ದ. ಸ್ನೇಹಿತರಾದ ತರುಣ್, ಅಕ್ಬರ್ ನೆರವಾಗಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಒಬ್ಬ ಆರೋಪಿ ಪ್ರಾಪಪ್ರಜ್ಞೆಯಿಂದ ಎರಡು ದಿನದ ಹಿಂದೆ ಬಾಲಕಿಯ ತಂದೆಗೆ ಕೊಲೆಯ ವಿಷಯ ತಿಳಿಸಿದಾಗ, ಕೃತ್ಯ ಬಯಲಾಯಿತು. ಹೂತಿದ್ದ ಸ್ಥಳ ಅಗೆದಾಗ, ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಶವದ ನಿಖರ ಗುರುತಿಸುವಿಕೆಗೆ ಡಿಎನ್‌ಎ ಪರೀಕ್ಷೆ ನಡೆಸಲಾಗುವುದು’ ಎಂದು ತಿಳಿಸಿದ್ದಾರೆ. 

ತರುಣ್‌
ಅಕ್ಬರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.