ADVERTISEMENT

ಹಂಪಿಯಿಂದ ನಾಪತ್ತೆಯಾಗಿದ್ದ ಮಹಾರಾಷ್ಟ್ರದ ಪ್ರವಾಸಿಗ ರಾಜಸ್ಥಾನದಲ್ಲಿ ಪತ್ತೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 13:51 IST
Last Updated 28 ಅಕ್ಟೋಬರ್ 2025, 13:51 IST
<div class="paragraphs"><p>ಆದಿತ್ಯಕುಮಾರ ಪ್ರಜಾಪತಿ</p></div>

ಆದಿತ್ಯಕುಮಾರ ಪ್ರಜಾಪತಿ

   

ಹೊಸಪೇಟೆ (ವಿಜಯನಗರ): ಹಂಪಿಯ ವರಾಹ ದೇವಸ್ಥಾನದ ಬಳಿಯಿಂದ ಅ.24ರಂದು ನಾಪತ್ತೆಯಾಗಿದ್ದ ಮಹಾರಾಷ್ಟ್ರ ಕೊಲ್ಹಾಪುರದ ಯುವಕ ಆದಿತ್ಯಕುಮಾರ ಪ್ರಜಾಪತಿ ರಾಜಸ್ಥಾನದಲ್ಲಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

‘ತಂದೆಯೊಂದಿಗೆ ಮುನಿಸಿಕೊಂಡಿದ್ದ ಯುವಕ, ಕುಟುಂಬದವರೆಲ್ಲ ಹಂಪಿಯಲ್ಲಿ ಇದ್ದಾಗಲೇ ಅವರಿಗೆ ಹೇಳದೆ ಜೋಧಪುರ ರೈಲು ಹತ್ತಿಕೊಂಡು ರಾಜಸ್ಥಾನದಲ್ಲಿನ ತನ್ನ ಸಂಬಂಧಿಕರ ಮನೆಗೆ ಹೋಗಿದ್ದಾನೆ, ಅಲ್ಲಿಂದ ವಿಡಿಯೊ ಕರೆ ಮಾಡಿ ತಾನು ರಾಜಸ್ಥಾನಕ್ಕೆ ಬಂದಿದ್ದಾಗಿ ಹೇಳಿದ್ದಾನೆ. ಹೀಗಾಗಿ ಆತನ ಇರುವಿಕೆ ಪತ್ತೆಯಾಗಿದೆ. ಆತನನ್ನು ಇಲ್ಲಿಗೆ ಕರೆಸಿಕೊಳ್ಳಲಾಗುತ್ತಿದ್ದು, ಕುಟುಂಬದವರು ಸಹ ಸದ್ಯ ನಿರಾಳರಾಗಿದ್ದಾರೆ’ ಎಂದು ಕಮಲಾಪುರ ಪೊಲೀಸ್‌ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.