ADVERTISEMENT

ಜಿ.ರಾಮಕೃಷ್ಣ ಸೇರಿ ಮೂವರಿಗೆ ನಾಡೋಜ

ಹಂಪಿ ವಿಶ್ವವಿದ್ಯಾಲಯದಲ್ಲಿ ನುಡಿ ಹಬ್ಬ ಇಂದು; ರಾಜ್ಯಪಾಲರಿಂದ ಗೌರವ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 4:14 IST
Last Updated 24 ಫೆಬ್ರುವರಿ 2026, 4:14 IST
ಜಿ.ರಾಮಕೃಷ್ಣ
ಜಿ.ರಾಮಕೃಷ್ಣ   

ಹೊಸಪೇಟೆ (ವಿಜಯನಗರ): ಶಿಕ್ಷಣ ತಜ್ಞ ಪ್ರೊ.ಜಿ.ರಾಮಕೃಷ್ಣ, ಶತಾಯುಷಿ ಸಾಹಿತಿ ಪ್ರೊ.ಸಿ.ಮಹದೇವಪ್ಪ ಮತ್ತು ಸಮಾಜ ಸೇವಕ ಎಚ್.ಸಿ.ಸತ್ಯನ್ ಅವರು ಪ್ರಸಕ್ತ ಸಾಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಗೌರವಕ್ಕೆ ಆಯ್ಕೆಯಾಗಿದ್ದಾರೆ.

‘ವಿಶ್ವವಿದ್ಯಲಯದ ವಿದ್ಯಾರಣ್ಯ ಆವರಣದ ‘ನವರಂಗ’ ಬಯಲು ರಂಗಮಂದಿರದಲ್ಲಿ ಮಂಗಳವಾರ ಸಂಜೆ ನಡೆಯುವ 34ನೇ ನುಡಿಹಬ್ಬದಲ್ಲಿ (ಘಟಿಕೋತ್ಸವ) ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರ್‌ಚಂದ್ರ ಗೆಹಲೋತ್‌ ಅವರು ನಾಡೋಜ ಗೌರವ ಪ್ರದಾನ ಮಾಡುವರು’ ಎಂದು ಕುಲಪತಿ ಪ್ರೊ. ಡಿ.ವಿ.ಪರಮಶಿವಮೂರ್ತಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸತ್ಯನ್ ಅವರ ವಿರುದ್ಧ ಪ್ರಕರಣಗಳಿವೆ ಎಂದು ಆರೋಪಿಸಿ ಎರಡು ಪತ್ರಗಳು ಬಂದಿದ್ದು, ಅದನ್ನು ರಾಜ್ಯಪಾಲರ ಗಮನಕ್ಕೆ ತರಲಾಯಿತು. ನಾಡೋಜ ನೀಡಿ ಗೌರವಿಸುವಂತೆ ರಾಜ್ಯಪಾಲರ ಸೂಚನೆ ಮೇರೆಗೆ ಅವರನ್ನು ಆಯ್ಕೆ ಮಾಡಲಾಗಿದೆ. ಸತ್ಯನ್ ವಿರುದ್ಧ ಗಂಭೀರ ಪ್ರಕರಣಗಳು ಬಾಕಿ ಉಳಿದಿರುವುದು ದೃಢಪಟ್ಟರೆ ಕೊನೆಯ ಕ್ಷಣದಲ್ಲಿ ಗೌರವವನ್ನು ತಡೆಹಿಡಿಯುಲಾಗುವುದು’ ಎಂದರು.

ADVERTISEMENT

‘107 ಜನರಿಗೆ ಪಿಎಚ್‌.ಡಿ ಪದವಿ ಮತ್ತು 123 ಜನರಿಗೆ ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಗುವುದು. ರಾಜ್ಯದಲ್ಲಿ 10 ಸಾವಿರ ಜನಸಂಖ್ಯೆಯುಳ್ಳ ಮುಕ್ರಿ ಸಮುದಾಯದಲ್ಲೇ ಜನಿಸಿ, ಪದವಿ, ಸ್ನಾತಕೋತ್ತರ ಪದವಿ ಗಳಿಸಿ ‘ಮುಕ್ರಿಗಳ ಮೌಖಿಕ ಸಾಹಿತ್ಯ, ಸಾಂಸ್ಕೃತಿಕ ಅಧ್ಯಯನ’ ಎಂಬ ಮಹಾಪ್ರಬಂಧ ರಚಿಸಿರುವ ಸಿ.ಪಿ.ಶಿವಚಂದ್ರ ಅವರಿಗೆ ಪಿಎಚ್‌.ಡಿ.ಪದವಿ ಪ್ರದಾನ ಮಾಡಲಾಗುವುದು’ ಎಂದರು.

ಸಿ.ಮಹದೇವಪ್ಪ
ಎಚ್‌.ಸಿ.ಸತ್ಯನ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.