ಮರಿಯಮ್ಮನಹಳ್ಳಿ: ಸಮೀಪದ ಗೊಲ್ಲರಹಳ್ಳಿ ಬಳಿಯ ಹೊಲವೊಂದರಲ್ಲಿ ಮಂಗಳವಾರ ಕೃಷಿ ಇಲಾಖೆಯ ಅಧಿಕಾರಿಗಳು ಡ್ರೋಣ್ ಮೂಲಕ ನ್ಯಾನೊ ಯೂರಿಯಾ ಸಿಂಪಡಣೆ ಪ್ರಾತ್ಯಕ್ಷಿಕೆ ತೋರಿಸಿದರು.
ಡ್ರೋಣ್ ಮೂಲಕ ನ್ಯಾನೊ ಯೂರಿಯಾ, ಪೀಡೆನಾಶಕ, ನ್ಯಾನೊ ಡಿಎಪಿ ದ್ರಾವಣವನ್ನು ಮುಸುಕಿನ ಜೋಳ, ಶೇಂಗಾ ಮತ್ತು ರಾಗಿ ಬೆಳೆಗಳಲ್ಲಿ ಸಿಂಪಡಿಸುವ ಮೂಲಕ ರೈತರಿಗೆ ನೂತನ ತಂತ್ರಜ್ಞಾನದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಪಟ್ಟಣದ ರೈತ ಸಂಪರ್ಕ ಕೇಂದ್ರ ಹಾಗೂ ಐಎಫ್‍ಎಫ್‍ಸಿಒ ಸಂಸ್ಥೆಯ ಸಯೋಗದಲ್ಲಿ ನಡೆಸಲಾಯಿತು.
ಸಹಾಯಕ ಕೃಷಿ ನಿರ್ದೇಶಕ ಮನೋಹರ್, ಹರಳು ರೂಪದ ಯೂರಿಯಾ ಗೊಬ್ಬರದ ಪರ್ಯಾಯವಾಗಿ ದ್ರವರೂಪದ ನ್ಯಾನೊ ಯೂರಿಯಾ ಬಳಸುವದರಿಂದ ಆಗುವ ಉಪಯೋಗಗಳ ಕುರಿತು ಮಾಹಿತಿ ನೀಡಿದರು.
ಕೃಷಿ ಅಧಿಕಾರಿ ಶಿವಮೂರ್ತಿ, ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ವಿಜಯಕುಮಾರ್, ಟಿ.ಹುಲುಗಪ್ಪ, ರಮೇಶ್, ಕೊಮಾರೆಪ್ಪ, ಅಂಜಿನಪ್ಪ, ಹೇಮಂತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.