
ಹೊಸಪೇಟೆ (ವಿಜಯಗರ): ನಗರದ ಪ್ರತಿಷ್ಟಿತ ಟಿ.ಎಂ.ಎ.ಇ.ಎಸ್. ಪಾಲಿಟೆಕ್ನಿಕ್ ಸಂಸ್ಥೆಯ ನಾಲ್ಕು ವಿಭಾಗಗಳು ನ್ಯಾಷನಲ್ ಬೋರ್ಡ್ ಆಫ್ ಅಕ್ರೆಡಿಟೇಷನ್ (ಎನ್‌ಬಿಎ) ಮಾನ್ಯತೆ ಪಡೆದಿವೆ.
ಎನ್‌ಬಿಎ ಮಾನ್ಯತೆಗಾಗಿ 2022ರಲ್ಲಿ ಸಿವಿಲ್, ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಷನ್ ಈ ವಿಭಾಗಗಳಿಗೆ ಅರ್ಜಿ ಸಲ್ಲಿಸಲಾಗಿತ್ತು. ಎನ್‌ಬಿಎ ಪರಿಣಿತರ ತಂಡ ಕಳೆದ ಫೆಬ್ರುವರಿ 16ರಿಂದ 18ರವರೆಗೆ ಕಾಲೇಜಿಗೆ ಭೇಟಿ ಕೊಟ್ಟು, ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ, ಮಾಹಿತಿ ತಂತ್ರಜ್ಞಾನದ ಬಳಕೆ, ಪ್ಲೇಸ್‌ಮೆಂಟ್, ಟ್ರೈನಿಂಗ್ ಹಾಗೂ ಇತರ ಚಟುವಟಿಕೆಗಳನ್ನು ಗಮನಿಸಿ ವರದಿ ಸಲ್ಲಿಸಿತ್ತು. ಅದರ ಆಧಾರದಲ್ಲಿ ಮೂರು ವರ್ಷಗಳ ಅವಧಿಗೆ ಈ ಮಾನ್ಯತೆ ದೊರೆತಿದೆ. ಮೊದಲ ಪ್ರಯತ್ನದಲ್ಲೇ ಈ ನಾಲ್ಕೂ ವಿಭಾಗಗಳಿಗೆ ಎನ್‌ಬಿಎ ಮಾನ್ಯತೆ ಲಭಿಸಿದೆ ಎಂದು ಕಾಲೇಜಿನ ಪ್ರಾಂಶುಪಾಲ ಎಚ್.ಕೆ.ಶಂಕರಾನಂದ ತಿಳಿಸಿದ್ದಾರೆ.
ಈ ಸಂಸ್ಥೆ 1983ರಲ್ಲಿ ಆರಂಭಗೊಂಡಿದ್ದು, ಸಂಸ್ಥೆಯ ಸಾಧನೆಗೆ ತೆಗ್ಗಿನ ಮಠ ಸಂಸ್ಥೆಯ ವರಸದ್ಯೋಜಾತ ಸ್ವಾಮೀಜಿ, ಕಾರ್ಯದರ್ಶಿ ಟಿ. ಎಂ. ಚಂದ್ರಶೇಖರಯ್ಯ, ಉಪ ಕಾರ್ಯದರ್ಶಿ ಟಿ. ಎಂ. ವಿಜಯ್ ಕುಮಾರ್, ನಿವೃತ್ತ ಪ್ರಾಚಾರ್ಯ ವೈ. ಎಂ. ಉಮಾಶಂಕರ್, ಉಪ ಪ್ರಾಚಾರ್ಯ ಟಿ. ನಜಿರುದ್ದೀನ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.