ಹೂವಿನಹಡಗಲಿ (ವಿಜಯನಗರ ಜಿಲ್ಲೆ): ಈರುಳ್ಳಿ ಬೆಲೆ ಕುಸಿತದಿಂದ ಕಂಗಾಲಾಗಿರುವ ತಾಲ್ಲೂಕಿನ ಉತ್ತಂಗಿಯ ರೈತ ಮೂಲಿಮನಿ ಶರಣಪ್ಪ, ಕಟಾವು ಹಂತದ ಈರುಳ್ಳಿ ಫಸಲು ಇರುವ ಮೂರು ಎಕರೆ ಹೊಲವನ್ನು ಶುಕ್ರವಾರ ಕುರಿ ಮೇಯಲು ಬಿಟ್ಟು ನಾಶಪಡಿಸಿದ್ದಾರೆ.
ಬೆಂಗಳೂರು ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕ್ವಿಂಟಲ್‌ಗೆ ₹1,000 ದಿಂದ ₹800ರಷ್ಟು ಮಾತ್ರ ಇದೆ. ಈರುಳ್ಳಿ ಕಿತ್ತು, ಗ್ರೇಡಿಂಗ್ ಮಾಡಿ ಮಾರುಕಟ್ಟೆಗೆ ಸಾಗಿಸಲು 50 ಕೆಜಿಯ ಪ್ರತಿ ಪಾಕೀಟ್‌ಗೆ ₹300ರಿಂದ ₹400 ಖರ್ಚು ತಗುಲುತ್ತದೆ. ಕಟಾವು, ಸಾಗಣೆ ವೆಚ್ಚದ ಹಣವೂ ಸಿಗದ ಕಾರಣ ರೈತರು ಸ್ವತಃ ಬೆಳೆ ನಾಶಕ್ಕೆ ಮುಂದಾಗಿದ್ದಾರೆ.
‘ಮೂರು ಎಕರೆಯಲ್ಲಿ ಈರುಳ್ಳಿ ಬೆಳೆಯಲು ₹1.30 ಲಕ್ಷ ಖರ್ಚು ಮಾಡಿರುವೆ. ಸದ್ಯ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿರುವುದರಿಂದ ಮಾರಾಟದಿಂದ ಬಂದ ಹಣ ಕಟಾವು ಖರ್ಚಿಗೂ ಸಾಲುವುದಿಲ್ಲ’ ಎಂದು ಶರಣಪ್ಪ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.