ADVERTISEMENT

Terror Attack: ಎಸ್‌ಐ ಆಗಿದ್ದಾಗ ಪಡೆದಿದ್ದ ತರಬೇತಿ ಹಲವರ ರಕ್ಷಣೆಗೆ ನೆರವಾಯ್ತು!

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 8:20 IST
Last Updated 23 ಏಪ್ರಿಲ್ 2025, 8:20 IST
   

ಹರಪನಹಳ್ಳಿ (ವಿಜಯನಗರ ಜಿಲ್ಲೆ): ಕಾಶ್ಮೀರದ ಪಹಲ್ಗಾಮ್‌ನಲ್ಲಿ ಗುಂಡಿನ ದಾಳಿಯಿಂದ ಸ್ವಲ್ಪದರಲ್ಲೇ ಪಾರಾದ ಬಳ್ಳಾರಿ ಕೃಷ್ಣದೇವರಾಯ ವಿಶ್ವವಿದ್ಯಾಲದಯ ಸಿಂಡಿಕೇಟ್‌  ಸಮಿತಿ ಮಾಜಿ ಸದಸ್ಯ ಟಿ.ಎಂ.ರಾಜಶೇಖರ ಅವರ ಅಳಿಯ ದೊಡ್ಡಬಸಯ್ಯ ಅವರು ತಮಗೆ ದೊರೆತಿದ್ದ ಬಂದೂಕು ತರಬೇತಿಯ ಅನುಭವದಿಂದ ತಮ್ಮ ಕುಟುಂಬದವರನ್ನು ಮಾತ್ರವಲ್ಲ, ಹತ್ತಾರು ಮಂದಿ ಇತರರನ್ನೂ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಮಾಡುವಲ್ಲಿ ಸಫಲರಾದರು.

ದೊಡ್ಡಬಸಯ್ಯ ಅವರು ಈಗ ಜ್ಯೂನಿಯರ್ ಎಂಜಿನಿಯರ್ ಆಗಿದ್ದರೂ ಇದಕ್ಕೆ ಮೊದಲು ಅವರು ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್  ಆಗಿದ್ದರು. ಬಂದೂಕು ತರಬೇತಿಯನ್ನು ಅವರು ಪಡೆದಿದ್ದರು. ಗುಂಡಿನ ಸದ್ದಿನಿಂದಲೇ  ಅದು ಯಾವ ಗನ್‌ನಿಂದ ಹೊರಟ ಸದ್ದು ಎಂಬುದನ್ನು ನಿಖರವಾಗಿ ಗುರುತಿಸಬಲ್ಲವರಾಗಿದ್ದರು. ಹೀಗಾಗಿ  ಉಗ್ರರು ಹಾರಿಸಿದ ಗುಂಡು ಎಕೆ 47 ರೈಫಲ್‌ನದೇ ಎಂದು ಕ್ಷಣದಲ್ಲಿ  ಅರ್ಥಮಾಡಿಕೊಂಡ ಅವರು ತಮ್ಮ ಸುತ್ತಮುತ್ತಲಿದ್ದ ಪ್ರವಾಸಿಗರ ರಕ್ಷಣೆಗೆ ಕ್ಣಣದಲ್ಲೇ ಉಪಾಯ ಹೇಳಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT