ADVERTISEMENT

ಸಿ.ಡಿ ಪ್ರಕರಣ: ಯುವತಿಯ ಸಂಬಂಧಿಕರ ಮನೆಗೆ ನೋಟಿಸ್ ಅಂಟಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2021, 13:20 IST
Last Updated 14 ಮಾರ್ಚ್ 2021, 13:20 IST
   

ವಿಜಯಪುರ: ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸಂತ್ರಸ್ತ ಯುವತಿಗೆ ನೀಡಿರುವ ನೋಟಿಸ್ ಅನ್ನುಸಂತ್ರಸ್ತೆಯ ತಾಯಿಯ ತವರು ಮನೆಯ ಬಾಗಿಲಿಗೆ ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಅಂಟಿಸಿದ್ದಾರೆ.

ಮನೆಗೆ ಬೀಗ ಹಾಕಿದ್ದು, ನೋಟಿಸ್ ಅನ್ನು ಬಾಗಿಲಿಗೆ ಅಂಟಿಸಿದ್ದಾರೆ.

ವಿಡಿಯೊ ಬಹಿರಂಗವಾಗುವುದಕ್ಕೂ ಮುನ್ನವೇ ಕುಟುಂಬ ಸದಸ್ಯರು ಮನೆಗೆ ಬೀಗಹಾಕಿ ಬೇರೆಡೆಗೆ ಹೋಗಿದ್ದಾರೆ.

ADVERTISEMENT

ದಿನೇಶ್ ಕಲ್ಲಹಳ್ಳಿ ದಾಖಲಿಸಿದ್ದ ದೂರಿನ ವಿಚಾರಣೆ ಚಾಲ್ತಿಯಲಿದ್ದು, ಈ ಬಗ್ಗೆ ನಿಮ್ಮ ಹೇಳಿಕೆ ಪಡೆಯಬೇಕಾಗಿರುವುದರಿಂದ ನೋಟಿಸ್ ನೋಡಿದ ಕೂಡಲೆ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿರುವ ಪೊಲೀಸ್ ಅಧಿಕಾರಿ ಮೊಬೈಲ್ ಸಂಖ್ಯೆಗೆ ಕರೆ ಮಾಡುವಂತೆ ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.