ADVERTISEMENT

ಪ್ರಜಾವಾಣಿ ವರದಿ ಪರಿಣಾಮ: ಹಾಸ್ಟೆಲ್‌ನಲ್ಲಿ ದುರಸ್ತಿ, ಸ್ವಚ್ಛತೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 13:50 IST
Last Updated 23 ಸೆಪ್ಟೆಂಬರ್ 2022, 13:50 IST
ಹೊಸಪೇಟೆಯ ಜಂಬುನಾಥಹಳ್ಳಿ ರಸ್ತೆಯಲ್ಲಿನ ಮೆಟ್ರಿಕ್‌ ನಂತರದ  ಎಸ್ಟಿ ವಿದ್ಯಾರ್ಥಿ ನಿಲಯ
ಹೊಸಪೇಟೆಯ ಜಂಬುನಾಥಹಳ್ಳಿ ರಸ್ತೆಯಲ್ಲಿನ ಮೆಟ್ರಿಕ್‌ ನಂತರದ  ಎಸ್ಟಿ ವಿದ್ಯಾರ್ಥಿ ನಿಲಯ   

ಹೊಸಪೇಟೆ (ವಿಜಯನಗರ): ನಗರ ಹೊರವಲಯದ ಜಂಬುನಾಥಹಳ್ಳಿ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಪರಿಶಿಷ್ಟ ಪಂಗಡದವರ ಮೆಟ್ರಿಕ್‌ ನಂತರದ ಹಾಸ್ಟೆಲ್‌ಗೆ ಶುಕ್ರವಾರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಗಾದಿಲಿಂಗಪ್ಪ ಅವರು ಭೇಟಿ ನೀಡಿ, ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ನಂತರ ಶೌಚಾಲಯ, ಬಾತ್‌ ರೂಮ್‌ನಲ್ಲಿ ಹಾಳಾಗಿದ್ದ ಟ್ಯಾಪ್‌ಗಳನ್ನು ದುರಸ್ತಿಗೊಳಿಸಿದರು. ಸ್ವಚ್ಛತೆಗೂ ಕ್ರಮ ಕೈಗೊಂಡರು.

‘ಸ್ವಚ್ಛತೆ ಮರೀಚಿಕೆ, ಕಳಪೆ ಆಹಾರ’ ಶೀರ್ಷಿಕೆ ಅಡಿ ‘ಪ್ರಜಾವಾಣಿ’ ಶುಕ್ರವಾರ (ಸೆ.23) ವರದಿ ಪ್ರಕಟಿಸಿತ್ತು. ವರದಿ ಬೆನ್ನಲ್ಲೇ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ. ವಿದ್ಯಾರ್ಥಿಗಳು ಈ ವಿಷಯವನ್ನು ‘ಪ್ರಜಾವಾಣಿ’ಗೆ ಖಚಿತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT