ADVERTISEMENT

‘ಪ್ರಜಾವಾಣಿ’ ವರದಿ ಪರಿಣಾಮ: ತುರ್ತಾ ಕಾಲುವೆ ಪರಿಶೀಲಿಸಿದ ತಹಶೀಲ್ದಾರ್‌

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 14:31 IST
Last Updated 9 ಆಗಸ್ಟ್ 2022, 14:31 IST
ತಹಶೀಲ್ದಾರ್‌ ವಿಶ್ವಜೀತ್‌ ಮೆಹ್ತಾ ಅವರು ಮಂಗಳವಾರ ತಾಲ್ಲೂಕಿನ ವೆಂಕಟಾಪುರ ಕ್ಯಾಂಪ್‌ ಸಮೀಪದ ತುರ್ತಾ ವಿಜಯನಗರ ಉಪಕಾಲುವೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಹಶೀಲ್ದಾರ್‌ ವಿಶ್ವಜೀತ್‌ ಮೆಹ್ತಾ ಅವರು ಮಂಗಳವಾರ ತಾಲ್ಲೂಕಿನ ವೆಂಕಟಾಪುರ ಕ್ಯಾಂಪ್‌ ಸಮೀಪದ ತುರ್ತಾ ವಿಜಯನಗರ ಉಪಕಾಲುವೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.   

ಹೊಸಪೇಟೆ (ವಿಜಯನಗರ): ತಹಶೀಲ್ದಾರ್‌ ವಿಶ್ವಜೀತ್‌ ಮೆಹ್ತಾ ಅವರು ಮಂಗಳವಾರ ತಾಲ್ಲೂಕಿನ ವೆಂಕಟಾಪುರ ಕ್ಯಾಂಪ್‌ ಸಮೀಪದ ತುರ್ತಾ ವಿಜಯನಗರ ಉಪಕಾಲುವೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಪ್ರಜಾವಾಣಿಯಲ್ಲಿ ಕಾಲುವೆ ಒಡೆದಿರುವ ವಿಷಯ ಪ್ರಕಟಿಸಿದ್ದನ್ನು ಗಮನಿಸಿ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವೆ. ಅಪಾರ ಪ್ರಮಾಣದ ನೀರು ಹರಿದು ಹೋಗುತ್ತಿದ್ದು, ಸಾಧ್ಯವಾದಷ್ಟು ಬೇಗ ಅದನ್ನು ದುರಸ್ತಿಗೊಳಿಸುವಂತೆ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ’ ಎಂದು ಮೆಹ್ತಾ ತಿಳಿಸಿದರು.

‘ತಿಂಗಳಲ್ಲಿ ಒಡೆದ ಮತ್ತೊಂದು ಕಾಲುವೆ’ ಶೀರ್ಷಿಕೆ ಅಡಿ ಮಂಗಳವಾರ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ಹರಿದು ಹೋಗುತ್ತಿದ್ದರೂ ಯಾರೊಬ್ಬರೂ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ರೈತರು ಆರೋಪಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.