ADVERTISEMENT

ಪ್ರತಿಭೆ ಅನ್ವೇಷಣೆಯಲ್ಲಿ ಪಾರದರ್ಶಕತೆ ಅಗತ್ಯ: ಅಣ್ಣಪ್ಪ ಹಾರಕನಾಳು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2023, 14:47 IST
Last Updated 7 ಆಗಸ್ಟ್ 2023, 14:47 IST
ಅರಸೀಕೆರೆ ಸಮೀಪದ ಕ್ಯಾರಕಟ್ಟೆ ಗ್ರಾಮದಲ್ಲಿ ಸೋಮವಾರ ಕಂಚಿಕೆರೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು
ಅರಸೀಕೆರೆ ಸಮೀಪದ ಕ್ಯಾರಕಟ್ಟೆ ಗ್ರಾಮದಲ್ಲಿ ಸೋಮವಾರ ಕಂಚಿಕೆರೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು   

ಅರಸೀಕೆರೆ: ಸಮೀಪದ ಕ್ಯಾರಕಟ್ಟೆ ಗ್ರಾಮದಲ್ಲಿ ಸೋಮವಾರ ಕಂಚಿಕೆರೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು.

ಕ್ಲಸ್ಟರ್ ವ್ಯಾಪ್ತಿಯ 18 ಶಾಲೆಗಳ ಇನ್ನೂರಕ್ಕೂ ಅಧಿಕ ಮಕ್ಕಳಿಗೆ ಕನ್ನಡ, ಹಿಂದಿ, ಇಂಗ್ಲಿಷ್, ಕಂಠಪಾಠ, ಅಭಿನಯಗೀತೆ, ಜನಪದ ಗೀತೆ ಸೇರಿದಂತೆ ವೇಷ ಭೂಷಣ ಸ್ಫರ್ಧೆಗಳು ನಡೆದವು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಅಣ್ಣಪ್ಪ ಹಾರಕನಾಳು ಮಾತನಾಡಿ, ‘ಮಕ್ಕಳ ಪ್ರತಿಭೆ ಅನ್ವೇಷಣೆಯಲ್ಲಿ ಶಿಕ್ಷಕರು ಪಾರದರ್ಶಕತೆ ತೋರಬೇಕು. ಈ ಮೂಲಕ ನಿಜವಾದ ಪ್ರತಿಭಾ ಅನಾವರಣಕ್ಕೆ ವೇದಿಕೆಯಾಗಬೇಕು. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಪ್ರತಿಯೊಬ್ಬರು ಕೈ ಜೋಡಿಸಿದಾಗ ಯಶಸ್ಸು ಸಾಧ್ಯ’ ಎಂದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರಂಗಮ್ಮ, ಉಪಾಧ್ಯಕ್ಷೆ ಯಶೋಧಮ್ಮ, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ತಿಪ್ಪೇಶಿ, ಮುಖ್ಯ ಶಿಕ್ಷಕ ಪುರಂದರ ಸ್ವಾಮಿ, ಶಿಕ್ಷಕ ನಿಂಗನಗೌಡ, ಅರ್ಪಿತಾ, ಬಸವರಾಜಪ್ಪ ಮುಖಂಡ ಶಿವಯೋಗಿ, ನಂದ್ಯಪ್ಪ, ಪಾರ್ವತಮ್ಮ, ಗೋಣೆಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT