ಹೊಸಪೇಟೆ (ವಿಜಯನಗರ): ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಅವರು ಅಲೆಮಾರಿ ಸಮುದಾಯದವರ ಮೇಲೆ ನೀಡಿರುವ ಹೇಳಿಕೆ ಹಿನ್ನೆಲೆಯಲ್ಲಿ ಅವರನ್ನು ತಕ್ಷಣ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಬುಧವಾರ ಇಲ್ಲಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
49-ಸಮುದಾಯಗಳ ಒಳಮೀಸಲಾತಿ ಸಮಿತಿಯ ರಾಜ್ಯ ಸಂಚಾಲಕ ಸಣ್ಣ ಮಾರೆಪ್ಪ ನೇತೃತ್ವದಲ್ಲಿ ಬುಧವಾರ ಇಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಪಲ್ಲವಿ ಅವರು ಸುಳ್ಳು ದೂರು ದಾಖಲಿಸಿದ್ದು ಖಂಡನೀಯ. ಹೀಗಾಗಿ ಅವರನ್ನು ನಿಗಮದ ಅಧ್ಯಕ್ಷ ಸ್ಥಾನದಿಂದ ಶೀಘ್ರ ತೆರವುಗೊಳಿಸಬೇಕು, ತಮ್ಮ ವರ್ತನೆಗಾಗಿ ಕ್ಷಮೆ ಯಾಚಿಸಬೇಕು, ಇಲ್ಲವಾದರೆ ರಾಜಧಾನಿಯಲ್ಲೇ ಧರಣಿ ನಡೆಸಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಮುಖಂಡರಾದ ಕಿನ್ನೂರಿ ಶೇಖಪ್ಪ, ಮಂಜಪ್ಪ, ಸಿದ್ದು ಬೆಳಲಗಲ್, ಜೆ.ರಮೇಶ, ಹನುಮಕ್ಕ ಶಿಳ್ಯೆಕ್ಯಾತ, ಶೇಖರ್, ಚನ್ನದಾಸರ್, ಹಂಪಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.