ADVERTISEMENT

ಅರಿವು, ಆಚಾರ, ಅನುಭಾವದ ದಾಸೋಹ ಆಗಲಿ: ತಾಂಡೂರ್

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2023, 14:11 IST
Last Updated 7 ಆಗಸ್ಟ್ 2023, 14:11 IST
ಹಗರಿಬೊಮ್ಮನಹಳ್ಳಿಯಲ್ಲಿ ಸಾಮೂಹಿಕವಾಗಿ ಇಷ್ಟಲಿಂಗ ಪೂಜೆಯ ಪ್ರಾತ್ಯಕ್ಷಿಕೆ ನಡೆಯಿತು
ಹಗರಿಬೊಮ್ಮನಹಳ್ಳಿಯಲ್ಲಿ ಸಾಮೂಹಿಕವಾಗಿ ಇಷ್ಟಲಿಂಗ ಪೂಜೆಯ ಪ್ರಾತ್ಯಕ್ಷಿಕೆ ನಡೆಯಿತು   

ಹಗರಿಬೊಮ್ಮನಹಳ್ಳಿ: ‘ಅರಿವು, ಆಚಾರ ಮತ್ತು ಅನುಭಾವವನ್ನು ದಾಸೋಹ ಮಾಡಬೇಕಿದೆ’ ಎಂದು ಮನೋವೈದ್ಯ ಅಜಯಕುಮಾರ್ ತಾಂಡೂರ್ ಪ್ರತಿಪಾದಿಸಿದರು.

ಪಟ್ಟಣದ ರೇಣುಕ ವಿದ್ಯಾಮಂದಿರದಲ್ಲಿ ಜಿಲ್ಲಾ ಕದಳಿ ಮಹಿಳಾ ವೇದಿಕೆ, ತಾಲ್ಲೂಕು ಶರಣಸಾಹಿತ್ಯ ಪರಿಷತ್ ಹಾಗೂ ಹೊಸಪೇಟೆಯ ಇಷ್ಟಲಿಂಗ ಅಧ್ಯಯನ ಕೇಂದ್ರದಿಂದ ಇಷ್ಟಲಿಂಗ ಪೂಜೆ ಮತ್ತು ಧ್ಯಾನದ ಪ್ರಾತ್ಯಕ್ಷಿಕೆ, ವೈಚಾರಿಕತೆ ಕುರಿತು ಹಮ್ಮಿಕೊಂಡಿದ್ದ ಪ್ರಾತ್ಯಕ್ಷಿಕೆಯಲ್ಲಿ ಅವರು ಮಾತನಾಡಿದರು.

‘ಇಷ್ಟಲಿಂಗದ ಮಹತ್ವದ ಕುರಿತು ಜಗಜ್ಯೋತಿ ಬಸವೇಶ್ವರರು ಸತತ ಸಂಶೋಧನೆ ನಡೆಸಿ ಬ್ರಹ್ಮಾಂಡದ ಆಕಾರವನ್ನು ಇಷ್ಟಲಿಂಗಕ್ಕೆ ನೀಡಿದ್ದಾರೆ’ ಎಂದರು.

ADVERTISEMENT

‘ಲಿಂಗಾಯತ ಧರ್ಮ ಸ್ವತಂತ್ರವಾಗಿ ಬದುಕುವ ಮತ್ತು ಯಾರಿಂದಲೂ ಏನನ್ನೂ ನಿರೀಕ್ಷೆ ಮಾಡದ ಧರ್ಮವಾಗಿದೆ, ಯಾರ ಮುಂದೆಯೂ ಕೈಚಾಚುವುದಿಲ್ಲ’ ಎಂದರು.

ಹೊಸಪೇಟೆಯ ಬಸವ ದಳದ ಟಿ.ಎಚ್.ಬಸವರಾಜ, ಲಿಂಗಧಾರಣೆಯಿಂದ ವೈಜ್ಞಾನಿಕ, ಮಾನಸಿಕ, ಆಧ್ಯಾತ್ಮಿಕ, ಬೌದ್ಧಿಕವಾಗಿ ದೃಢತೆ ತಂದುಕೊಳ್ಳುವುದಾಗಿದೆ ಎಂದು ಅಭಿಪ್ರಾಯಪಟ್ಟರು.

ಕದಳಿ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷೆ ಎಂ.ಸವಿತಾ ಆನಂದ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷೆ ಕೆ.ಎಂ.ಇಂದುಮತಿ ಮಾತನಾಡಿದರು.

ವೇದಿಕೆಯ ಪದಾಧಿಕಾರಿಗಳಾದ ವಿಜಯ ಬದಾಮಿ, ಮಧುರೆಡ್ಡಿ, ಲಕ್ಷ್ಮೀರೆಡ್ಡಿ, ಶೋಭಾ ಜಿಂಕೇರಿ, ಕೆ.ಶಾರದಾ ಮಂಜುನಾಥ, ಚಂಪಾ, ವಿಜಯ ಮನೋಹರ, ನೀಲಾಂಬಿಕೆ, ಮಂಗಳಾ ಬಸವರಾಜ, ಬಸವ ಬಳಗದ ಸರ್ಪಭೂಷಣ, ವೀರಣ್ಣ ಕಲ್ಮನಿ, ಸಾಹಿತಿಗಳಾದ ಎ.ಆರ್.ಪಂಪಣ್ಣ, ಮೇಟಿ ಕೊಟ್ರಪ್ಪ, ಉಪ್ಪಾರ ಬಸಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.