ADVERTISEMENT

ತಂಪೆರೆದ ಭಾರಿ ಬಿರುಗಾಳಿ ಮಳೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2021, 15:29 IST
Last Updated 29 ಏಪ್ರಿಲ್ 2021, 15:29 IST

ಹೊಸಪೇಟೆ (ವಿಜಯನಗರ): ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಗುರುವಾರ ಸಂಜೆ ಭಾರಿ ಬಿರುಗಾಳಿ ಮಳೆಯಾಗಿದೆ.

ಸಂಜೆ ಏಳು ಗಂಟೆಯಿಂದಲೇ ಭಾರಿ ಬಿರುಗಾಳಿ ಬೀಸಲು ಆರಂಭಿಸಿತು. ಬಳಿಕ ಬಿರುಗಾಳಿಯೊಂದಿಗೆ ಜೋರು ಮಳೆ ಪ್ರಾರಂಭವಾಯಿತು. 7.30ಕ್ಕೆ ಆರಂಭಗೊಂಡ ಮಳೆ ಎಡೆಬಿಡದೇ ರಾತ್ರಿ 9 ಗಂಟೆಯ ವರೆಗೆ ಸುರಿಯಿತು. ಈ ಮಧ್ಯೆ ವಿದ್ಯುತ್‌ ಪೂರೈಕೆ ಕಡಿತಗೊಳಿಸಿದ್ದರಿಂದ ಇಡೀ ನಗರ ಅಂಧಕಾರದಲ್ಲಿ ಮುಳುಗಿತು.

ತಾಲ್ಲೂಕಿನ ಹಂಪಿ, ಕಮಲಾಪುರ, ಹೊಸೂರು, ಇಪ್ಪಿತ್ತೇರಿ ಮಾಗಾಣಿ, ಬಸವನದುರ್ಗ, ಧರ್ಮದಗುಡ್ಡ, ಕಾಳಘಟ್ಟ, ಕೊಂಡನಾಯಕನಹಳ್ಳಿ, ಮಲಪನಗುಡಿ, ನಾಗೇನಹಳ್ಳಿ, ವ್ಯಾಸನಕೆರೆ, ಡಣಾಪುರ, ಸಂಕ್ಲಾಪುರ, ಕಾರಿಗನೂರು, ವಡ್ಡರಹಳ್ಳಿ, ಇಂಗಳಗಿ, ಪಾಪಿನಾಯಕನಹಳ್ಳಿ ಸೇರಿದಂತೆ ಹಲವೆಡೆ ಮಳೆಯಾಗಿದೆ.

ADVERTISEMENT

ಗಂಟೆಗೂ ಹೆಚ್ಚು ಕಾಲ ಮಳೆಯಾಗಿದ್ದರಿಂದ ಎಲ್ಲೆಡೆ ವಾತಾವರಣ ಸಂಪೂರ್ಣ ತಂಪಾಗಿದೆ. 40 ಡಿಗ್ರಿ ಸೆಲ್ಸಿಯಸ್‌ ತಾಪಮಾನ, ಬಿಸಿಲ ಝಳದಿಂದ ರೋಸಿ ಹೋಗಿದ್ದ ಜನರಿಗೆ ಮಳೆ ಸಮಾಧಾನ ತಂದುಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.