ADVERTISEMENT

ತೆರವಿಗೆ ಕೃಷ್ಣಾ ನಗರ ತಾಂಡ ನಿವಾಸಿಗಳ ವಿರೋಧ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2021, 13:05 IST
Last Updated 9 ನವೆಂಬರ್ 2021, 13:05 IST
ಕೃಷ್ಣಾ ನಗರ ನಿವಾಸಿಗಳು ಮಂಗಳವಾರ ಹೊಸಪೇಟೆಯಲ್ಲಿ ನಗರಸಭೆ ಪೌರಾಯುಕ್ತ ಮನ್ಸೂರ್‌ ಅಲಿ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಕೃಷ್ಣಾ ನಗರ ನಿವಾಸಿಗಳು ಮಂಗಳವಾರ ಹೊಸಪೇಟೆಯಲ್ಲಿ ನಗರಸಭೆ ಪೌರಾಯುಕ್ತ ಮನ್ಸೂರ್‌ ಅಲಿ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಹೊಸಪೇಟೆ (ವಿಜಯನಗರ): ನಗರದ 35ನೇ ವಾರ್ಡಿನಲ್ಲಿ ವಾಸಿಸುತ್ತಿರುವ ಕೃಷ್ಣಾನಗರ ತಾಂಡ (ಬದ್ಯಾನಾಯ್ಕ್ ತಾಂಡ)ನಿವಾಸಿಗಳನ್ನು ತೆರವುಗೊಳಿಸಬಾರದು ಎಂದು ಸ್ಥಳೀಯರು ಆಗ್ರಹಿಸಿದರು.

ಈ ಸಂಬಂಧ ಸ್ಥಳೀಯ ನಿವಾಸಿಗಳು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ, ಉಪವಿಭಾಗಧಿಕಾರಿ ಕಚೇರಿ, ನಗರಸಭೆ, ತಾಲ್ಲೂಕು ಕಚೇರಿ, ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮನವಿ ಪತ್ರ ಸಲ್ಲಿಸಿದರು.

ನಗರಸಭೆಯ 35ನೇ ವಾರ್ಡಿನಲ್ಲಿ 90 ವರ್ಷಗಳಿಂದ ವಾಸಿಸುತ್ತಿದ್ದರೂ ಇಲ್ಲಿಯವರೆಗೆ ನಮ್ಮ ತಾಂಡವನ್ನು ನಗರಸಭೆ ‘ಡಿಮ್ಯಾಂಡ್‌’ನಲ್ಲಿ ಸೇರಿಸಿಲ್ಲ. ಈ ಬಗ್ಗೆ 2018ರಲ್ಲಿ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸಂಡೂರು-ಹೊಸಪೇಟೆ ಸಿ.ಸಿ ರಸ್ತೆ ಹಾಗೂ ವೈದ್ಯಕೀಯ ಕಾಲೇಜು ನಿರ್ಮಾಣದ ನೆಪ ಹೇಳಿ ಸಚಿವ ಆನಂದ್ ಸಿಂಗ್ ಅವರು ಸ್ಥಳೀಯರನ್ನು ಸ್ಥಳಾಂತರಿಸಲು ಸೂಚಿಸಿದ್ದಾರೆ. ಇದು ಸರಿಯಲ್ಲ ಎಂದು ತಿಳಿಸಿದರು.

ADVERTISEMENT

ಬಂಜಾರ ಸೇವಾ ಸಂಘದ ಅಧ್ಯಕ್ಷ ಆರ್.ರಾಮ್‌ಜಿ ನಾಯ್ಕ, ಪ್ರಧಾನ ಕಾರ್ಯದರ್ಶಿ ಎಲ್.ತೇಜಾನಾಯ್ಕ, ಮುಖಂಡರಾದ ಗುಡಗುಂಟೆ ಮಲ್ಲಿಕಾರ್ಜುನ, ಎಲ್.ಕೃಷ್ಣಾ ನಾಯ್ಕ, ಎಲ್.ಗೋವಿಂದ ನಾಯ್ಕ, ಎಲ್.ಸುರೇಶ್ ನಾಯ್ಕ, ಎಲ್.ಚಂದ್ರಾ ನಾಯ್ಕ, ಕೆ.ವೆಂಕಟೇಶ್, ನಾಗಾ ನಾಯ್ಕ, ಹುಲುಗಪ್ಪ, ಮಂಜುಳಾ ಬಾಯಿ, ನೀಲಾಬಾಯಿ, ಸೀತಾಬಾಯಿ, ಗಂದಿಬಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.