ADVERTISEMENT

ಹೊಸಪೇಟೆ: ಮೃತ ಕಾರ್ಮಿಕನ ಕುಟುಂಬಕ್ಕೆ ₹21 ಲಕ್ಷ ಪರಿಹಾರ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2025, 16:21 IST
Last Updated 22 ಮಾರ್ಚ್ 2025, 16:21 IST

ಹೊಸಪೇಟೆ: ಮರಿಯಮ್ಮನಹಳ್ಳಿ ಸಮೀಪದ ಬಿಎಂಎಂ ಇಸ್ಪಾತ್ ಕಾರ್ಖಾನೆಯಲ್ಲಿ ಶನಿವಾರ ಬಾಯ್ಲರ್‌ಗೆ ಬಿದ್ದು ಮೃತಪಟ್ಟ ನಾಗರಾಜ್‌ ಅವರ ಕುಟುಂಬಕ್ಕೆ ₹7 ಲಕ್ಷದ ಭವಿಷ್ಯನಿಧಿ ಸಹಿತ ಒಟ್ಟು ₹21 ಲಕ್ಷ ಪರಿಹಾರ ನೀಡಲು ಕಂಪನಿ ಒಪ್ಪಿಕೊಂಡಿದೆ.

ಜೊತೆಗೆ ಕುಟುಂಬದ ಒಬ್ಬ ಸದಸ್ಯರಿಗೆ ನೌಕರಿ ನೀಡಲು ಸಹ ಕಂಪನಿ ಒಪ್ಪಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. 

ಜನ ರೊಚ್ಚಿಗೇಳಬಾರದು ಎಂಬ ಕಾರಣಕ್ಕೆ ಇಲ್ಲಿನ 100 ಹಾಸಿಗೆ ಆಸ್ಪತ್ರೆ ಬಳಿ ಹಾಗೂ ಕಮಲಾಪುರದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಸಂಧಾನ ಮಾತುಕತೆ ಕೊನೆಗೊಳ್ಳುವ ತನಕ ಕಮಲಾಪುರದ ಕೆಲವರನ್ನು ಕಮಲಾಪುರ ಠಾಣೆಯಲ್ಲೇ ಕುಳ್ಳಿರಿಸಲಾಗಿತ್ತು. ಹೀಗಾಗಿ ಕುಟುಂಬದವರು ಪರಿಹಾರಕ್ಕೆ ಒಪ್ಪಿದ ಬಳಿಕ ಮೃತನ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಯಿತು ಎಂದು ಹೇಳಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.