ADVERTISEMENT

ವಿಜಯನಗರ | ಗಣೇಶ ಉತ್ಸವದಲ್ಲಿ ನಿಯಮ ಉಲ್ಲಂಘನೆ; 17 ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2022, 9:14 IST
Last Updated 5 ಸೆಪ್ಟೆಂಬರ್ 2022, 9:14 IST
ಎಸ್ಪಿ ಡಾ. ಅರುಣ್‌ ಕೆ.
ಎಸ್ಪಿ ಡಾ. ಅರುಣ್‌ ಕೆ.   

ಹೊಸಪೇಟೆ (ವಿಜಯನಗರ): ‘ಜಿಲ್ಲೆಯಲ್ಲಿ ಐದು ದಿನಗಳ ಗಣೇಶ ಉತ್ಸವದ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಒಟ್ಟು 17 ಪ್ರಕರಣಗಳನ್ನು ದಾಖಲಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ. ಸೋಮವಾರ ತಿಳಿಸಿದ್ದಾರೆ.

ನಿಯಮ ಮೀರಿ ತಡರಾತ್ರಿ ಗಣೇಶನ ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿ ಡಿ.ಜೆ ಬಳಸಿದಕ್ಕಾಗಿ 10, ರಸ್ತೆಯಲ್ಲಿ ಪೆಂಡಾಲ್‌ ಹಾಕಿದ್ದಕ್ಕೆ 5 ಪ್ರಕರಣ ದಾಖಲಿಸಲಾಗಿದೆ. ಜಿಲ್ಲೆಯ ಹಗರಿಬೊಮ್ಮನಹಳ್ಳಿ ಹಾಗೂ ಕೂಡ್ಲಿಗಿಯಲ್ಲಿ ತಲಾ ಒಂದು ಪ್ರಕರಣ ಡಿ.ಜೆ.ಗೆ ಸಂಬಂಧಿಸಿದೆ. ಸಿ.ಸಿ.ಟಿ.ವಿ. ಕ್ಯಾಮೆರಾಗಳ ಪರಿಶೀಲನೆ ಮುಂದುವರೆದಿದ್ದು, ನಿಯಮ ಮೀರಿದ್ದು ಕಂಡು ಬಂದರೆ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT