ಹೊಸಪೇಟೆ (ವಿಜಯನಗರ): ಜಿಲ್ಲೆಯ ಶಾಲೆಗಳಲ್ಲಿ ಗುರುವಾರ ತರಗತಿಗಳು ಆರಂಭವಾಗಿದ್ದು, ಮಕ್ಕಳಿಗೆ ಹೂವಿನ ಮಳೆಗರೆದು, ಗುಲಾಬಿ ನೀಡಿ ಸ್ವಾಗತಿಸಲಾಯಿತು. ಬಾಳೆಹಣ್ಣು, ಮೊಟ್ಟೆ ಮಧ್ಯಾಹ್ನದ ಬಿಸಿಯೂಟದ ಜತೆಗೆ ನೀಡಲಾಯಿತು.
ಹೊಸಪೇಟೆ ತಾಲ್ಲೂಕಿನ ಹಲವು ಶಾಲೆಗಳಿಗೆ ಇಸ್ಕಾನ್ ವತಿಯಿಂದ ಬಿಸಿಯೂಟ ಪೂರೈಕೆಯಾಗಿದ್ದು, ಹೆಸರುಬೇಳೆ ಪಾಯಸ ಬಡಿಸಲಾಯಿತು.
‘ವಿದ್ಯಾರ್ಥಿಗಳು ಲವಲವಿಕೆಯಿಂದಲೇ ಶಾಲೆಗೆ ಬಂದಿದ್ದಾರೆ. ಕೆಲವು ಕಡೆ ಸ್ಥಳೀಯ ಜನಪ್ರತಿನಿಧಿಗಳು ಬಂದಿದ್ದರು. ಎಲ್ಲಾ ಶಿಕ್ಷಕರು ಸಹ ಹಾಜರಿದ್ದು ಮಕ್ಕಳನ್ನು ಸ್ವಾಗತಿಸಿದರು’ ಎಂದು ಡಿಡಿಪಿಐ ವೆಂಕಟೇಶ್ ರಾಮಚಂದ್ರಪ್ಪ ತಿಳಿಸಿದರು.
ಶೇ 30ರಷ್ಟು ಹಾಜರಾತಿ: ‘ಮೊದಲ ದಿನ ಶಾಲೆಗಳಿಗೆ ಹಾಜರಾದ ವಿದ್ಯಾರ್ಥಿಗಳ ಪ್ರಮಾಣ ಶೇ 30ರಷ್ಟಿತ್ತು. ಶುಕ್ರವಾರದಿಂದ ಆ ಪ್ರಮಾಣ ಹೆಚ್ಚಲಿದೆ. ಗಾಂಧಿ ಕಾಲೊನಿಯಲ್ಲಿನ ಶಾಲೆಯಲ್ಲಿ ನಾನು ಸಹ ಮಕ್ಕಳೊಂದಿಗೆ ಕುಳಿತು ಮಧ್ಯಾಹ್ನದ ಬಿಸಿಯೂಟ ಸವಿದೆ’ ಎಂದು ಹೊಸಪೇಟೆ ಬಿಇಒ ಶೇಖರ್ ಹೊರಪೇಟೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.