ಹೊಸಪೇಟೆ (ವಿಜಯನಗರ): ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಮಧ್ಯಾರಾಧನೆ ಪ್ರಯುಕ್ತ ನಗರ ಹಾಗೂ ಜಿಲ್ಲೆಯ ಎಲ್ಲಾ ರಾಯರ ಮಠಗಳಲ್ಲಿ ಸೋಮವಾರ ವಿಶೇಷ ಪೂಜಾ ವಿಧಿವಿಧಾನಗಳು ಭಕ್ತಿಪೂರ್ವಕವಾಗಿ ನಡೆದವು.
ನಗರದ ನಂಜನಗೂಡು ರಾಣಿಪೇಟೆ, ಗಾಂಧಿ ಕಾಲೋನಿ, ಕಾಶಿ ಆಂಜನೇಯ ನಂಜನಗೂಡು ರಾಘವೇಂದ್ರ ಸ್ವಾಮಿಗಳ ಶಾಖಾ ಮಠಗಳಲ್ಲಿ ಬೆಳಿಗ್ಗೆ ವಿಶೇಷವಾಗಿ ಫಲಪಂಚಾಮೃತಾಭಿಷೇಕ, ಉತ್ಸವ ಮೂರ್ತಿಗೆ ಕನಕಾಭಿಷೇಕ, ಸರ್ವಸೇವೆ, ಮಹಾಪೂಜೆ, ಮಹಾಮಂಗಳರಾತಿ ಜರುಗಿತು. ಬಳಿಕ ಅನ್ನಸಂತರ್ಪಣೆ ನಡೆಯಿತು.
ವಿವಿಧ ಮಠಗಳ ಆವರಣದಲ್ಲಿ ಸಾಮೂಹಿಕ ಭಜನೆ, ಅಷ್ಟೋತ್ತರ ಪಾರಾಯಣ, ಕೋಲಾಟ, ನೃತ್ಯ ಪ್ರದರ್ಶನ ನಡೆಯಿತು.
ನಗರದ ವಿಜಯಾ ಚಿತ್ರಮಂದಿರ ಸಮೀಪದ ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ ಬೃಂದಾವನಕ್ಕೆ ಬೆಳಿಗ್ಗೆ ಅಷ್ಟೋತ್ತರ ಪಾರಾಯಣ, ವಿಷ್ಣು ಸಹಸ್ರ ನಾಮ ಪಠದೊಂದಿಗೆ ಹಾಲಿನ ಅಭಿಷೇಕ, ಪಂಚಾಮೃತಾಭಿಷೇಕ, ಅರ್ಚನೆ, ಕನಕಾಭಿಷೇಕ, ಸರ್ವಸೇವೆ ನಡೆಯಿತು. ಪುಷ್ಪಾರ್ಚನೆ, ಹಸ್ತೋದಕ ಮಹಾಮಂಗಳರಾತಿ ಜರುಗಿತು. ಬಂದ ಭಕ್ತರಿಗೆ ಅನ್ನದಾನ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.