ADVERTISEMENT

ಬೀದಿನಾಯಿಗಳ ದಾಳಿ, ಬಾಲಕನಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 12:58 IST
Last Updated 22 ಫೆಬ್ರುವರಿ 2021, 12:58 IST
ಬೀದಿ ನಾಯಿಗಳ ದಾಳಿಯಿಂದ ರಾಜುವಿನ ಸೊಂಟ, ಹೊಟ್ಟೆಗೆ ಗಾಯಗಳಾಗಿದ್ದನ್ನು ತೋರಿಸುತ್ತಿರುವ ಅವರ ತಾಯಿ ಪೂರ್ಣಿಮಾ
ಬೀದಿ ನಾಯಿಗಳ ದಾಳಿಯಿಂದ ರಾಜುವಿನ ಸೊಂಟ, ಹೊಟ್ಟೆಗೆ ಗಾಯಗಳಾಗಿದ್ದನ್ನು ತೋರಿಸುತ್ತಿರುವ ಅವರ ತಾಯಿ ಪೂರ್ಣಿಮಾ   

ವಿಜಯನಗರ (ಹೊಸಪೇಟೆ): ನಗರದ ರಾಣಿಪೇಟೆಯಲ್ಲಿ ಎರಡು ವರ್ಷದ ಬಾಲಕನ ಮೇಲೆ ಬೀದಿನಾಯಿಗಳು ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿವೆ.

ಫೆ. 20ರಂದು ಈ ಘಟನೆ ನಡೆದಿದೆ. ‘ರಾಜು ಮನೆ ಮುಂದೆ ಆಟ ಆಡುತ್ತಿರುವಾಗ ಬೀದಿ ನಾಯಿಗಳು ದಾಳಿ ನಡೆಸಿವೆ. ಹೊಟ್ಟೆ, ಸೊಂಟಕ್ಕೆ ನಾಯಿಗಳು ಕಚ್ಚಿವೆ. ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಯಾವುದೇ ಪ್ರಾಣಾಪಾಯವಿಲ್ಲ’ ಎಂದು ಅವರ ತಾಯಿ ಪೂರ್ಣಿಮಾ ತಿಳಿಸಿದ್ದಾರೆ.

‘ರಾಣಿಪೇಟೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿವೆ. ಜನರ ಮೇಲೆ ಎರಗಿ ಬೀಳುತ್ತಿವೆ. ದ್ವಿಚಕ್ರ ವಾಹನ ಸವಾರರನ್ನು ಅಟ್ಟಿಸಿಕೊಂಡು ಹೋಗುತ್ತಿವೆ. ಸಂಬಂಧಪಟ್ಟ ಇಲಾಖೆಯವರು ಗಮನಹರಿಸಿ ಅವುಗಳ ಹಾವಳಿ ತಡೆಗೆ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.