ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ
ಪ್ರಾತಿನಿಧಿಕ ಚಿತ್ರ
ಹೊಸಪೇಟೆ (ವಿಜಯನಗರ): ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಜಿಲ್ಲೆಯಲ್ಲಿ ಕೊನೆಯ ಹಂತಕ್ಕೆ ಬಂದಿದ್ದರೂ, ಒಂದೆರಡು ತಾಲ್ಲೂಕು ಹೊರತುಪಡಿಸಿ ಉಳಿದೆಡೆ ಮಂಗಳವಾರವೇ ಪೂರ್ಣಗೊಳ್ಳುವ ಸಾಧ್ಯತೆ ಇಲ್ಲ ಎಂದು ಹೇಳಲಾಗುತ್ತಿದೆ.
ಸೋಮವಾರ ಸಂಜೆಯವರೆಗೆ ಜಿಲ್ಲೆಯಲ್ಲಿ ಶೇ 82.90ರಷ್ಟು ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ. ಹೂವಿನಹಡಗಲಿ ತಾಲ್ಲೂಕು ಶೇ 94.66ರಷ್ಟು ಮನೆ ಪೂರ್ಣಗೊಳಿಸಿ ಮುಂಚೂಣಿಯಲ್ಲಿದೆ. ಹೊಸಪೇಟೆ ತಾಲ್ಲೂಕು ಶೇ 69.34ರಷ್ಟು ಮನೆ ಸಮೀಕ್ಷೆ ನಡೆಸಿ ಕೊನೆಯ ಸ್ಥಾನದಲ್ಲಿದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಶಶಿಕಲಾ ‘ಪ್ರಜಾವಾಣಿ’ಗೆ ತಿಳಿಸಿದರು.
ಶಾಲೆ, ದೇವಸ್ಥಾನಗಳಂತಹ ಜನವಸತಿ ಅಲ್ಲದ ಕಡೆಗಳಲ್ಲಿ ಸಹ ಜೆಸ್ಕಾಂ ಯುಎಚ್‌ಐಡಿ ಸ್ಟಿಕ್ಕರ್ ಅಂಟಿಸಿದ್ದು, ಅದರ ನಿರ್ದಿಷ್ಟ ಲೆಕ್ಕ ಗೊತ್ತಾಗಿಲ್ಲ. ಅದನ್ನು ಕಡೆದು ಸಾಫ್ಟ್‌ವೇರ್‌ನಿಂದ ತೆಗೆದುಹಾಕುವ ಕೆಲಸ ನಡೆಯುತ್ತಿದೆ’ ಎಂದು ಶಶಿಕಲಾ ಅವರು ತಿಳಿಸಿದರು. ಆದರೆ ಅಂತಹ ಯಾವ ಪ್ರಸಂಗವೂ ಆಗಿಲ್ಲ, ಕೇವಲ ಮನೆಗಳಿಗಷ್ಟೇ ಯುಎಚ್ಐಡಿ ಅಂಟಿಸಲಾಗಿದೆ ಎಂದು ಜೆಸ್ಕಾಂ ಅಧಿಕಾರಿಯೊಬ್ಬರು ಸಮರ್ಥಿಸಿಕೊಂಡಿದ್ದಾರೆ.
ಯುಎಚ್‌ಐಡಿ ಅಂಟಿಸದ ಹಲವು ಮನೆಗಳೂ ಇದ್ದವು. ಅಲ್ಲೂ ಸಮೀಕ್ಷೆ ನಡೆಸಲಾಗುತ್ತಿದೆ. ಸಮೀಕ್ಷೆಯ ಮೇಲ್ವಿಚಾರಕರಾಗಿ ನಿಯುಕ್ತರಾದವರಿಗೆ ಇದರ ಹೊಣೆ ವಹಿಸಲಾಗಿದೆ ಎಂದು ಬಿಸಿಎಂ ಅಧಿಕಾರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.