ADVERTISEMENT

ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 16:56 IST
Last Updated 12 ಜನವರಿ 2022, 16:56 IST
ಪತಂಜಲಿ ಯೋಗ ಸಮಿತಿಯು ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಹೊಸಪೇಟೆಯ ವಿಜಯನಗರ ವಿದ್ಯಾರ್ಥಿ ನಿಲಯದಲ್ಲಿ ಬುಧವಾರ ಯೋಗ ಶಿಬಿರ ಹಮ್ಮಿಕೊಂಡಿತ್ತು
ಪತಂಜಲಿ ಯೋಗ ಸಮಿತಿಯು ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಹೊಸಪೇಟೆಯ ವಿಜಯನಗರ ವಿದ್ಯಾರ್ಥಿ ನಿಲಯದಲ್ಲಿ ಬುಧವಾರ ಯೋಗ ಶಿಬಿರ ಹಮ್ಮಿಕೊಂಡಿತ್ತು   

ಹೊಸಪೇಟೆ (ವಿಜಯನಗರ): ನಗರದ ವಿವಿಧ ಕಡೆಗಳಲ್ಲಿ ಬುಧವಾರ ಸ್ವಾಮಿ ವಿವೇಕಾನಂದರ ಜನ್ಮ ದಿನ ಆಚರಿಸಲಾಯಿತು.

ಪತಂಜಲಿ ಯೋಗ ಸಮಿತಿ, ಯುವ ಭಾರತ ಸಂಘಟನೆ:

ವಿಜಯನಗರ ಕಾಲೇಜಿನ ಬಸವೇಶ್ವರ ವಿದ್ಯಾರ್ಥಿ ನಿಲಯದಲ್ಲಿ ವಿವೇಕಾನಂದರ ಭಾವಚಿತ್ರಕ್ಕೆ ಗೌರವ ಸಲ್ಲಿಸಿ, ಸೂರ್ಯ ನಮಸ್ಕಾರ, ಯೋಗ ಮಾಡಿದರು.

ADVERTISEMENT

ಯೋಗ ಸಮಿತಿಯ ಜಿಲ್ಲಾ ಪ್ರಭಾರಿ ಎಫ್.ಟಿ.ಹಳ್ಳಿಕೇರಿ ಮಾತನಾಡಿ, ‘ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ 75 ಕೋಟಿ ಸೂರ್ಯನಮಸ್ಕಾರ ಅಭಿಯಾನ ಕೈಗೊಂಡು ದೇಶದಾದ್ಯಂತ ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು. ಆರ್. ಪಾಂಡುರಂಗರಾವ್, ಕಾಲೇಜಿನ ಕಾರ್ಯದರ್ಶಿ ಒಪ್ಪತ್ತೆಪ್ಪ ಯಲಿಗಾರ, ಬಸವರಾಜ, ಕಿರಣಕುಮಾರ್, ದಾಕ್ಷಾಯಣಿ ಶಿವಕುಮಾರ, ಪೂಜಾ ಐಲಿ, ಅಶೋಕ ಚಿತ್ರಗಾರ, ಚಂದ್ರಶೇಖರ, ಶ್ರೀನಾಥ ಇದ್ದರು.

ಸಂಗೊಳ್ಳಿ ರಾಯಣ್ಣ ಸಾಮಾಜಿಕ ಶೈಕ್ಷಣಿಕ ಸೇವಾ ಟ್ರಸ್ಟ್:

ನಗರದ ಕುರುಬರ ಸಂಘದ ಕಚೇರಿಯಲ್ಲಿ ವಿವೇಕಾನಂದರ ಜಯಂತಿ ಆಚರಿಸಲಾಯಿತು. ಮುಖಂಡರಾದ ಬಂಡಿ ಭರಮಪ್ಪ, ಟ್ರಸ್ಟ್‌ನ ಸಂಸ್ಥಾಪಕ ರವಿಶಂಕರ್ ಡಿ., ಗೌರಿಶಂಕರ್, ಗೋಪಿ ಸಂಕ್ಲಾಪುರ, ಜಂಬಯ್ಯ, ಬಿಸಾಟಿ ತಾಯಪ್ಪ, ಗಂಟೆ ಸೋಮಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.