ಟೇಬಲ್ ಟೆನಿಸ್
(ಪಿಟಿಐ ಚಿತ್ರ)
ಹೊಸಪೇಟೆ: ಸಿದ್ಧಾರ್ಥ ಎಂ. ಮತ್ತು ಮಿಹಿಕಾ ಆರ್.ಉಡುಪ ಅವರು ಇಲ್ಲಿ ನಡೆಯುತ್ತಿರುವ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಶುಕ್ರವಾರ 13 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು.
ವಿಜಯನಗರ ಜಿಲ್ಲಾ ಟೇಬಲ್ ಟೆನಿಸ್ ಸಂಸ್ಥೆ ಆಶ್ರಯದಲ್ಲಿ ಇಲ್ಲಿನ ತುಂಗಭದ್ರಾ ಬೋರ್ಡ್ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ನಡೆದ ಟೂರ್ನಿಯ ಬಾಲಕರ ಫೈನಲ್‌ನಲ್ಲಿ ಸಿದ್ಧಾರ್ಥ್ ಅವರು 7-11, 11-6, 11-5, 13-11 ರಿಂದ ಅರ್ಣವ್ ಮಿಥುನ್ ಅವರನ್ನು ಸೋಲಿಸಿದರು.
ಸೆಮಿಫೈನಲ್‌ನಲ್ಲಿ ಅರ್ಣವ್ 11-8, 7-11, 11-5, 7-11, 11-9 ರಿಂದ ಸಾತ್ವಿಕ್ ವಿರುದ್ಧ; ಸಿದ್ಧಾರ್ಥ್ 13-11, 7-11, 11-7, 8-11, 11-1ರಿಂದ ದೀಪಕ್ ಬೆಳವಾಡಿ ವಿರುದ್ಧ ಜಯ ಗಳಿಸಿದ್ದರು.
ಬಾಲಕಿಯರ ಫೈನಲ್‌ನಲ್ಲಿ ಮಿಹಿಕಾ 11-8, 13-11, 11-5 ರಿಂದ ಯುಕ್ತಾ ಹರ್ಷಾ ಅವರನ್ನು ಮಣಿಸಿದರು.
ಸೆಮಿಫೈನಲ್‌ನಲ್ಲಿ ಯುಕ್ತಾ ಹರ್ಷಾ 11-7, 11-2, 11-8ರಿಂದ ಲಕ್ಷ್ಮೀ ಆಶ್ರಿತಾ ವಿರುದ್ಧ; ಮಿಹಿಕಾ 8-11, 11-7, 11-9, 7-11, 11-3 ರಿಂದ ಆರಾಧ್ಯಾ ಎಂ. ವಿರುದ್ಧ ಜಯ ಗಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.