
ಪ್ರಜಾವಾಣಿ ವಾರ್ತೆಹರಪನಹಳ್ಳಿ: ಇಲ್ಲಿಯ ಸಾರಿಗೆ ಬಸ್ ನಿಲ್ದಾಣದಲ್ಲಿ ದಾವಣಗೆರೆಗೆ ಹೋಗುತ್ತಿದ್ದ ಬಸ್ ಹತ್ತುವಾಗ ಮಹಿಳೆಯೊಬ್ಬರ ₹2.25 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣ ನಡೆದಿದೆ.
ಹೊಸಪೇಟೆ ಭಾರತಿನಗರದ ಷಮೀನ್ ಬಾನು ಅವರು ಚಿನ್ನಾಭರಣ ಕಳೆದುಕೊಂಡವರು.
ಫೆ.1ರಂದು ಹೊಸಪೇಟೆಯಿಂದ ಹರಪನಹಳ್ಳಿಗೆ ಬಂದಿಳಿದು, ಕಂಚಿಕೇರಿ ಮಾರ್ಗವಾಗಿ ದಾವಣಗೆರೆಗೆ ಹೋಗುವ ಸಾರಿಗೆ ಬಸ್ ಹತ್ತುತ್ತಿದ್ದಾಗ ಟ್ರಾಲಿ ಬ್ಯಾಗ್‌ನಲ್ಲಿದ್ದ 2 ಹ್ಯಾಂಗಿಂಗ್ಸ್, 2.5 ತೊಲೆ ನಕ್ಲೇಸ್‌ಗಳನ್ನು ಕಳ್ಳರು ಪ್ಲಾಸ್ಟಿಕ್ ಬಾಕ್ಸ್ ಸಮೇತ ಕಳವು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.