
ಹೊಸಪೇಟೆ (ವಿಜಯನಗರ): ‘ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಸುಪರ್ದಿಯಲ್ಲಿರುವ ಸ್ಮಾರಕಗಳ ಬಳಿ ಡ್ರೋನ್ ಹಾರಾಟಕ್ಕೆ ಇರುವ ನಿರ್ಬಂಧ ತೆರವು ಕುರಿತು ಶೀಘ್ರವೇ ಆದೇಶ ಹೊರಡಿಸಲಾಗುವುದು’ ಎಂದು ಕೇಂದ್ರದ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದರು.
ಇಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ‘ಸ್ಮಾರಕಗಳ ಬಳಿ ಕ್ಯಾಮೆರಾಗಳನ್ನು ಉಚಿತವಾಗಿ ಒಯ್ಯಲು ಅವಕಾಶ ಕಲ್ಪಿಸುವ ಚಿಂತನೆಯಿದೆ’ ಎಂದರು.
ಸಚಿವರು ಮಂಗಳವಾರ ವಿಜಯವಿಠ್ಠಲ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರವಾಸಿ ಮರ್ಗದರ್ಶಿಗಳ ಜೊತೆ ಚರ್ಚಿಸಿದರು. ಬಳಿಕ ಕಮಲಾಪುರದ ವಸ್ತುಸಂಗ್ರಹಾಲಯ ಭೇಟಿ ನೀಡಿದ್ದು, ಬಳಿಕ ಅಂಜನಾದ್ರಿಗೆ ತೆರಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.