ಸಮರ್ಪಣಾ ಸಂಕಲ್ಪಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ವಾಹನಗಳು ಬಂದಿರುವ ಕಾರಣ ನಗರದ ನಾಲ್ಕೂ ದಿಕ್ಕುಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ.
ಹೊಸಪೇಟೆ: ಸಮರ್ಪಣಾ ಸಂಕಲ್ಪಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ವಾಹನಗಳು ಬಂದಿರುವ ಕಾರಣ ನಗರದ ನಾಲ್ಕೂ ದಿಕ್ಕುಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ.
ಹೊಸಪೇಟೆಯಿಂದ ಬೆಂಗಳೂರು ರಸ್ತೆಯ ಮರಿಯಮ್ಮನ ಹಳ್ಳಿಯವರೆಗೆ, ಬಳ್ಳಾರಿ ರಸ್ತೆಯ ಪಾಪಿನಾಯನಕ ಹಳ್ಳಿ, ಕಮಲಾಪುರ, ಕೊಪ್ಪಳ ಟೋಲ್ ನವರೆಗೂ ವಾಹನಗಳು ಸಾಲುಗಟ್ಟಿ ನಿಂತಿವೆ.
ಸಂಡೂರು ರಸ್ತೆಯ ಕಲ್ಲಹಳ್ಳಿ, ರಾಜಾಪುರದ ವರೆಗೂ ಸಂಚಾರ ದಟ್ಟಣೆ ಇದೆ. ಈ ಮೂಲಕ ಹೊಸಪೇಟೆ ಸುತ್ತಮುತ್ತಲಿನ 12ರಿಂದ 14 ಕಿಮೀ ಸಂಚಾರ ದಟ್ಟಣೆ ಆಗಿರುವುದು ಸ್ಪಷ್ಟವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.