
ಪ್ರಜಾವಾಣಿ ವಾರ್ತೆ
ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ 18ನೇ ಕ್ರೆಸ್ಟ್‌ಗೇಟ್ ಅಳವಡಿಕೆಗೆ ಎಲ್ಲ ಸಿದ್ಧತೆ ಆಗಿದ್ದು, 2 ಅಡಿಯಷ್ಟು ಕೆಳಗೆ ನೀರು ಇಳಿದ ತಕ್ಷಣ, ಬಹುತೇಕ 3 ದಿನದಲ್ಲಿ ಗೇಟ್ ಅಳವಡಿಕೆ ಕಾರ್ಯ ನಡೆಯಲಿದೆ.
‘ಶುಕ್ರವಾರ ಜಲಾಶಯದಲ್ಲಿ ನೀರಿನ ಸಂಗ್ರಹ 49.66 ಟಿಎಂಸಿ ಅಡಿ ಇತ್ತು. ಸದ್ಯ ಕಾಲುವೆಗಳಿಗೆ 10,853 ಕ್ಯೂಸೆಕ್, ಹಾಗೂ ನದಿಗೆ 6,200 ಕ್ಯೂಸೆಕ್ ನೀರು ಹರಿಯುತ್ತಿದೆ. ದಿನಕ್ಕೆ ಬಹುತೇಕ 2 ಟಿಎಂಸಿ ಅಡಿ ನೀರು ಖಾಲಿಯಾಗುತ್ತಿದೆ. 1,613 ಅಡಿ ಮಟ್ಟಕ್ಕೆ ನೀರು ತಲುಪಿದಾಗ (43 ಟಿಎಂಸಿ ಅಡಿ) ಹೊಸ ಗೇಟ್ ಅಳವಡಿಸುವ ಕಾರ್ಯ ಬಹುತೇಕ ಡಿ.24ರಿಂದ ಆರಂಭವಾಗಲಿದೆ’ ಎಂದು ತುಂಗಭದ್ರಾ ಮಂಡಳಿಯ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.