ADVERTISEMENT

ತುಂಗಭದ್ರಾ ಜಲಾಶಯ: ಡಿ.5ರಿಂದ ಗೇಟ್‌ ಕವಚ ತೆರವು ಆರಂಭ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 19:52 IST
Last Updated 3 ಡಿಸೆಂಬರ್ 2025, 19:52 IST
ತುಂಗಭದ್ರಾ ಜಲಾಶಯ
ತುಂಗಭದ್ರಾ ಜಲಾಶಯ   

ಹೊಸಪೇಟೆ (ವಿಜಯನಗರ): ತುಂಗಭದ್ರಾ ಜಲಾಶಯದ ಎಲ್ಲಾ 33 ಕ್ರೆಸ್ಟ್‌ಗೇಟ್‌ಗಳನ್ನು ಬದಲಿಸಿ ಹೊಸ ಗೇಟ್‌ಗಳನ್ನು ಅಳವಡಿಸುವ ಕೆಲಸಕ್ಕೆ ಶುಕ್ರವಾರದಿಂದ (ಡಿ.5) ಚಾಲನೆ ಸಿಗುವ ಸಾಧ್ಯತೆ ಇದೆ.

‘ಜಲಾಶಯದಲ್ಲಿ ಸದ್ಯ 68 ಟಿಎಂಸಿ ಅಡಿ ನೀರಿದೆ. ಅದು 40 ಟಿಎಂಸಿ ಅಡಿಗೆ ಇಳಿದ ಬಳಿಕ, ಬಹುತೇಕ ಡಿಸೆಂಬರ್ 3ನೇ ವಾರ ಹೊಸ ಗೇಟ್ ಅಳವಡಿಕೆ ಕೆಲಸ ಅರಂಭವಾಗಲಿದೆ. ಗೇಟ್‌ಗಳ ಕವಚಗಳ ತೆರವು ಕಾರ್ಯ ಶುಕ್ರವಾರದಿಂದ ಆರಂಭವಾಗಲಿದೆ’ ಎಂದು ಸೆಕ್ಷನ್ ಎಂಜಿನಿಯರ್ ಕಿರಣ್ ತಿಳಿಸಿದರು.

‘ಹೊಸಪೇಟೆ ಮತ್ತು ಗದಗನಲ್ಲಿ ತಲಾ 7ರಂತೆ 14 ಗೇಟ್‌ಗಳು ಸಿದ್ಧವಾಗಿವೆ. ಒಂದು ಗೇಟ್‌ ಈಗಾಗಲೇ ಸಿದ್ಧವಿದ್ದು, 15 ಗೇಟ್‌ ಲಭ್ಯವಿವೆ. ಒಂದು ಹಳೆ ಗೇಟ್ ತೆಗೆದು ಹೊಸ ಗೇಟ್‌ ಅಳವಡಿಕೆಗೆ ಅಂದಾಜು 14 ದಿನ ಬೇಕು. ಮುಂದಿನ ಜೂನ್‌ ಒಳಗೆ ಎಲ್ಲ 33 ಗೇಟ್ ಅಳವಡಿಸುವ ಗುರಿಯಿದೆ’ ಎಂದರು.

ADVERTISEMENT

‘ಇನ್ನು ತಲಾ 7 ಗೇಟ್‌ಗಳು ಹೊಸಪೇಟೆ, ಗದಗನಲ್ಲಿ, 4 ಗೇಟ್‌ಗಳು ಅಹಮದಾಬಾದ್‌ನಲ್ಲಿ ತಯಾರಾಗಲಿವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.