ತುಂಗಭದ್ರಾ ಅಣೆಕಟ್ಟೆ
ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ 32 ಕ್ರಸ್ಟ್‌ಗೇಟ್‌ಗಳನ್ನು ಬದಲಿಸಲು ಕರೆಯಲಾಗಿದ್ದ ಟೆಂಡರ್ ಅವಧಿಯನ್ನು ಒಂದು ವಾರ ವಿಸ್ತರಿಸಲಾಗಿದೆ.
‘ಇ–ಟೆಂಡರ್ ಅನ್ನು ಸೋಮವಾರ ತೆರೆಯಬೇಕಿತ್ತು. ಆದರೆ, ₹60 ಕೋಟಿಗೂ ಹೆಚ್ಚು ವೆಚ್ಚದ ದೊಡ್ಡ ಕಾಮಗಾರಿ ನಿಭಾಯಿಸುವ ಸಮರ್ಥ ಕಂಪನಿಗಳು ಟೆಂಡರ್‌ನಲ್ಲಿ ಪಾಲ್ಗೊಂಡಿಲ್ಲ. ಅದಕ್ಕೆ ಅದರ ಅವಧಿ ಒಂದು ವಾರ ಮುಂದಕ್ಕೆ ಹಾಕಲಾಗಿದೆ. ಮೇ 5 ರಂದು ಟೆಂಡರ್ ತೆರೆಯಲಾಗುವುದು’ ಎಂದು ತುಂಗಭದ್ರಾ ಮಂಡಳಿ ಅಧಿಕಾರಿಯೊಬ್ಬರು ತಿಳಿಸಿದರು.
33ನೇ ಗೇಟ್ ಅಳವಡಿಕೆ ಕಾಮಗಾರಿ ಮೇ ಎರಡನೇ ವಾರದಲ್ಲಿ ನಡೆಯುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.