ADVERTISEMENT

ವಿಜಯನಗರ | ತುಂಗಭದ್ರಾ: 8 ಗೇಟ್ ಅಳವಡಿಕೆ ಪೂರ್ಣ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 22:32 IST
Last Updated 19 ಫೆಬ್ರುವರಿ 2026, 22:32 IST
<div class="paragraphs"><p> ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹಳೆ ಸೇತುವೆ</p></div>

ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹಳೆ ಸೇತುವೆ

   

– ಪ್ರಜಾವಾಣಿ ಚಿತ್ರ

ಹೊಸಪೇಟೆ: ತುಂಗಭದ್ರಾ ಅಣೆಕಟ್ಟೆಗೆ ಮತ್ತೆ ಮೂರು ಕ್ರೆಸ್ಟ್‌ಗೇಟ್‌ಗಳನ್ನು ಅಳವಡಿಸಲಾಗಿದೆ. ಈವರೆಗೆ ಒಟ್ಟು ಎಂಟು ಗೇಟ್‌ಗಳ ಅಳವಡಿಕೆ ಪೂರ್ಣಗೊಂಡಿದೆ.

ADVERTISEMENT

ನಂ.1, 17, 28ರಲ್ಲಿ ಕ್ರೆಸ್ಟ್‌ಗೇಟ್ ಅಳವಡಿಸಲಾಗಿದೆ. ನಂ. 18, 19, 20, 32 ಮತ್ತು 33ರಲ್ಲಿ ಈಗಾಗಲೇ ಕ್ರೆಸ್ಟ್ ಗೇಟ್ ಅಳವಡಿಸಲಾಗಿದೆ. 18ರಲ್ಲಿ ಗೇಟ್‌ ಎತ್ತಿ, ಇಳಿಸುವ ಪ್ರಯೋಗವೂ ನಡೆದಿದೆ. ಈ ತಿಂಗಳೊಳಗೆ 13 ಗೇಟ್‌ಗಳನ್ನು ಅಳವಡಿಕೆ ಪೂರ್ಣಗೊಳಿಸುವ ನಿರೀಕ್ಷೆ ಇದೆ’ ಎಂದು ತುಂಗಭದ್ರಾ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸದ್ಯ ನಂ.4,11,24,26 ಮತ್ತು 27ರಲ್ಲಿ (ಒಟ್ಟು 5) ಕ್ರೆಸ್ಟ್‌ಗೇಟ್ ಅಳವಡಿಕೆ ಪ್ರಗತಿಯಲ್ಲಿದೆ. ನಾಲ್ಕು ಹಳೆ ಗೇಟ್‌ಗಳನ್ನು (ನಂ.5, 21,25,31) ಕತ್ತರಿಸಿ ತೆಗೆಯುವ ಕಾರ್ಯವೂ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.