ADVERTISEMENT

ತುಂಗಭದ್ರಾ: ಅಂತಿಮ ಹಂತಕ್ಕೆ 7 ಗೇಟ್‌ಗಳು

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 23:40 IST
Last Updated 29 ಜನವರಿ 2026, 23:40 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ ಕ್ರೆಸ್ಟ್‌ಗೇಟ್‌ ಅಳವಡಿಕೆ ಕಾರ್ಯ ಕೊಂಚ ವೇಗ ಪಡೆದಿದೆ. ಒಂದೊಂದೇ ಗೇಟ್‌ ಅನ್ನು ಅಳವಡಿಸುವ ಬದಲು, ಏಳು ಗೇಟ್‌ಗಳ ಗರ್ಡರ್‌ಗಳನ್ನು ಒಟ್ಟೊಟ್ಟಿಗೆ ಅಳವಡಿಸುವ ಕೆಲಸ ನಡೆದಿದೆ. ಹೀಗಾಗಿ 20 ದಿನಗಳ ಅವಧಿಯಲ್ಲಿ ಒಟ್ಟು ಏಳು ತೂಬುಗಳಲ್ಲಿ ಕ್ರೆಸ್ಟ್‌ಗೇಟ್‌ ಅಳವಡಿಕೆ ಕಾರ್ಯ ಅಂತಿಮ ಹಂತಕ್ಕೆ ಬಂದಿದೆ.

‘ಕ್ರೆಸ್ಟ್‌ಗೇಟ್‌ಗಳಲ್ಲಿ ಮೂರು ಗರ್ಡರ್‌ಗಳನ್ನು ಕೂರಿಸುವುದೇ ಪ್ರಮುಖ ಘಟ್ಟ. ಸ್ಲಿಮ್‌ ಗೇಟ್‌ಗಳನ್ನು ಕೂರಿಸಲು ಒಂದು ದಿನ ಸಾಕು. ಹೀಗಾಗಿ ನಾವೀಗ ಗೇಟ್ ಸಂಖ್ಯೆ 4, 11, 19, 20, 24, 27 ಮತ್ತು 28ರಲ್ಲಿ ಗರ್ಡರ್‌ಗಳನ್ನು ಅಳವಡಿಸುವ ಕೆಲಸ ಮಾಡಿದ್ದು, ಎಲ್ಲವೂ ಕೊನೆಯ ಹಂತಕ್ಕೆ ಬಂದಿದೆ’ ಎಂದು ತುಂಗಭದ್ರಾ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದರು.

ಗುಜರಾತ್‌ಗೆ ಪಯಣ: ಗುಜರಾತ್‌ನ ಅಹಮದಾಬಾದ್‌ನಲ್ಲಿ ನಾಲ್ಕು ಗೇಟ್‌ಗಳು ಸಿದ್ಧವಾಗುತ್ತಿದ್ದು, ಕೆಲ ಅಗತ್ಯ ಮಾರ್ಗದರ್ಶನ ನೀಡಲು ಒಂದು ತಂಡ ಅಲ್ಲಿಗೆ ತೆರಳಿದೆ. ಉಳಿದ 14 ಗೇಟ್‌ಗಳಲ್ಲಿ ತಲಾ ಏಳು ಗೇಟ್‌ಗಳು ಗದಗ ಸಮೀಪದ ಅಡವಿಸೋಮಾಪುರದಲ್ಲಿ ಮತ್ತು ಟಿ.ಬಿ.ಡ್ಯಾಮ್‌ ಕಚೇರಿ ಸಮೀಪ ಸಿದ್ಧವಾಗುತ್ತಿವೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.