
ತುಂಗಭದ್ರಾ ಅಣೆಕಟ್ಟೆಯ 18ನೇ ಗೇಟ್ ಬಳಿ ಭಾನುವಾರ ಗೇಟ್‌ನ ಒಂದು ಭಾಗವನ್ನು ಕ್ರೇನ್ ಮೂಲಕ ಮೇಲಕ್ಕೆ ಎತ್ತಲಾಯಿತು –ಪ್ರಜಾವಾಣಿ ಚಿತ್ರ
ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ 18ನೇ ಕ್ರೆಸ್ಟ್‌ಗೇಟ್‌ನ್ನು ಇಡಿಯಾಗಿ ಎತ್ತುವ ಪ್ರಯೋಗ ಸೋಮವಾರ ಸಂಜೆ ಯಶಸ್ವಿಯಾಗಿ ನೆರವೇರಿತು.
‘50 ಟನ್ ತೂಕದ ಗೇಟ್‌ನ್ನು ಬಿಡಿಬಿಡಿಯಾಗಿ ತಂದು ಜೋಡಿಸಲಾಗಿತ್ತು. ಹಳೆಯ ಚೈನ್ ಲಿಂಕ್ ಬಳಸಿ ಗೇಟ್ ಮೇಲಕ್ಕೆತ್ತುವ ಪ್ರಯೋಗ ನಡೆಸಿ ಯಶಸ್ವಿಯಾಗಿದ್ದೇವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
‘ಎಲ್ಲ ಗೇಟ್‌ಗಳಿಗೆ ಹೊಸ ಚೈನ್‌ಲಿಂಕ್ ಬಳಸಲಾಗುತ್ತದೆ. ಚೆನ್ನೈಯಲ್ಲಿ ಅದು ತಯಾರಾಗಲಿದ್ದು, ಇದೀಗ ಹಳೆ ಚೈನ್‌ಲಿಂಕ್‌ನಲ್ಲಿ ಪ್ರಯೋಗ ನಡೆಸಲಾಗಿದೆ. ಗೇಟ್ ನಿರೀಕ್ಷಿಸಿದ ರೀತಿಯಲ್ಲೇ ಮೇಲಕ್ಕೆ ಬಂದಿದೆ’ ಎಂದರು.
4, 20 ಮತ್ತು 27ನೇ ಗೇಟ್‌ಗಳಲ್ಲಿ ಹೊಸ ಕ್ರೆಸ್ಟ್‌ಗೇಟ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದ್ದು, 11 ಮತ್ತು 28ನೇ ಗೇಟ್‌ಗಳಲ್ಲಿ ಹಳೆ ಗೇಟ್ ತೆರವುಗೊಳಿಸುವ ಕಾರ್ಯ ಬಹುತೇಕ ಕೊನೆಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.