ADVERTISEMENT

ಹಂಪಿ ಜೂಗೆ ಸಚಿವ ಉಮೇಶ ಕತ್ತಿ ಭೇಟಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2022, 16:31 IST
Last Updated 8 ಫೆಬ್ರುವರಿ 2022, 16:31 IST
ಅರಣ್ಯ ಸಚಿವ ಉಮೇಶ ಕತ್ತಿ ಅವರು ಮಂಗಳವಾರ ಹೊಸಪೇಟೆ ತಾಲ್ಲೂಕಿನ ಕಮಲಾಪುರ ಸಮೀಪದ ಹಂಪಿ ಜೂಗೆ ಭೇಟಿ ನೀಡಿ ಅಲ್ಲಿರುವ ಬಿಳಿ ಹುಲಿ ವೀಕ್ಷಿಸಿದರು
ಅರಣ್ಯ ಸಚಿವ ಉಮೇಶ ಕತ್ತಿ ಅವರು ಮಂಗಳವಾರ ಹೊಸಪೇಟೆ ತಾಲ್ಲೂಕಿನ ಕಮಲಾಪುರ ಸಮೀಪದ ಹಂಪಿ ಜೂಗೆ ಭೇಟಿ ನೀಡಿ ಅಲ್ಲಿರುವ ಬಿಳಿ ಹುಲಿ ವೀಕ್ಷಿಸಿದರು   

ಹೊಸಪೇಟೆ: ಅರಣ್ಯ ಸಚಿವ ಉಮೇಶ ಕತ್ತಿ ಅವರು ಮಂಗಳವಾರ ತಾಲ್ಲೂಕಿನ ಕಮಲಾಪುರ ಸಮೀಪದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನಕ್ಕೆ (ಹಂಪಿ ಜೂ) ಭೇಟಿ ನೀಡಿದರು.

ಎನ್‌ಎಂಡಿಸಿಗೆ ತೆರಳುವ ಮಾರ್ಗ ಮಧ್ಯೆ ಉದ್ಯಾನಕ್ಕೆ ಭೇಟಿ ನೀಡಿದ ಅವರು, ಹುಲಿ, ಸಿಂಹ ಸಫಾರಿ, ಪ್ರಾಣಿ ಸಂಗ್ರಹಾಲಯ ವೀಕ್ಷಿಸಿದರು. ‘ವಿಶ್ವಪ್ರಸಿದ್ಧ ಹಂಪಿ ಸನಿಹದಲ್ಲೇ ಇರುವುದರಿಂದ ಜೂಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ಕೊಡುತ್ತಾರೆ. ಇದರ ಸಮಗ್ರ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು’ ಎಂದು ಹೇಳಿದರು.

ಜೂಗೆ ನೀರಾನೆ, ಜಿರಾಫೆ ತರಬೇಕು. ಅವುಗಳಿಗೆ ಪ್ರತ್ಯೇಕ ಆವರಣ ನಿರ್ಮಿಸಬೇಕು. ಇನ್ನಷ್ಟು ಹುಲಿಗಳನ್ನು ಸಹ ತರಬೇಕು. ಅದಕ್ಕಾಗಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು. ಅದಕ್ಕೆ ತಗಲುವ ಅನುದಾನ ಬಿಡುಗಡೆಗೊಳಿಸಲಾಗುವುದು. ಪ್ರವಾಸಿಗರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ಯಾವುದೇ ಕುಂದು ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ADVERTISEMENT

ಅರಣ್ಯ ಇಲಾಖೆಯ ಸಿಸಿಎಫ್‌ ನಿಂಗರಾಜು, ಡಿಎಫ್‌ಒ ಸಿದ್ರಾಮಪ್ಪ ಚಳಕಾಪೂರೆ, ಹಂಪಿ ಜೂ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಎನ್‌. ಕಿರಣ್‌ ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.