ADVERTISEMENT

ಹರಪನಹಳ್ಳಿ: ವಾದಿರಾಜ ಮಠದ ವೃಂದಾವನದಲ್ಲಿ ಶಾಸನ ಪತ್ತೆ

​ಪ್ರಜಾವಾಣಿ ವಾರ್ತೆ
Published 26 ಮೇ 2025, 14:55 IST
Last Updated 26 ಮೇ 2025, 14:55 IST
ಹರಪನಹಳ್ಳಿ ವಾದಿರಾಜ ಮಠದಲ್ಲಿ ಪತ್ತೆಯಾದ ಅಪ್ರಕಟಿತ ದಾನ ಶಿಲಾಶಾಸನ
ಹರಪನಹಳ್ಳಿ ವಾದಿರಾಜ ಮಠದಲ್ಲಿ ಪತ್ತೆಯಾದ ಅಪ್ರಕಟಿತ ದಾನ ಶಿಲಾಶಾಸನ   

ಹರಪನಹಳ್ಳಿ (ವಿಜಯನಗರ ಜಿಲ್ಲೆ) : ‘ಇಲ್ಲಿನ ಜೋಯಿಸಕೇರಿಯ ವಾದಿರಾಜ ಮಠದ ವೃಂದಾವನದ ಹಿಂಭಾಗದಲ್ಲಿ 13ನೇ ಶತಮಾನದ ದಾನ ಶಿಲಾ ಶಾಸನ ಪತ್ತೆಯಾಗಿದೆ. ಅದರ ಹಿಂಭಾಗ ಏಳು ಸಾಲಿನ ಕನ್ನಡ ಲಿಪಿಯಿದೆ’ ಎಂದು ಸಂಶೋಧಕಿ ಎಂ.ಪಿ.ವೀಣಾ ಮಹಾಂತೇಶ್ ತಿಳಿಸಿದ್ದಾರೆ.

‘ಕೃಷ್ಣ ಶಿಲೆಯಲ್ಲಿರುವ ವೃತ್ತಾಕಾರದ ಪಾಣಿಪೀಠದಲ್ಲಿ ಆಮೆ ಚಿತ್ರವಿದೆ. ಎರಡೂವರೆ ಅಡಿ ಎತ್ತರವಿದೆ. ಮುಂಭಾಗದ ಗೋಡೆಯಲ್ಲಿ ಯತಿಯೊಬ್ಬರ ಚಿತ್ರವಿದೆ. ಶ್ರೀಲೋಲೇಶ್ವರ ದೇವರಿಗೆ ರುದ್ರಾಭಿಷೇಕ ಮಾಡುವ ನಾಗದೇವ ಭಟ್ಟರಿಗೆ ಮತ್ತು ಮಲ್ಲಿ ಭಟ್ಟರಿಗೆ ಕ್ರಿಯಾಶಕ್ತಿ ಪಂಡಿತರು ಶ್ರೀಲೋಕನಾಥ ದೇವರ ಮಾನ್ಯದ ಹೊಲದ ಪಶ್ಚಿಮದಲ್ಲಿರುವ ನೇರಲಗೆಯ ಬೆಂಚೆಯಲ್ಲಿ ಎರಡು ಮತ್ತರು ಭೂಮಿಯನ್ನು ದಾನಬಿಟ್ಟರು ಎಂಬ ಸಾರಾಂಶವಿದೆ’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT