ADVERTISEMENT

ರಮೇಶ್ ಕತ್ತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ: ಪವಾಡಿ ಹನುಮಂತಪ್ಪ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 7:42 IST
Last Updated 25 ಅಕ್ಟೋಬರ್ 2025, 7:42 IST
<div class="paragraphs"><p>ಹಗರಿಬೊಮ್ಮನಹಳ್ಳಿಯ ತಹಶೀಲ್ದಾರ್ ಕಚೇರಿಯಲ್ಲಿ ವಾಲ್ಮೀಕಿ ಮಹಾಸಭಾದ ತಾಲ್ಲೂಕು ಘಟಕದ ಪದಾಧಿಕಾರಿಗಳು, ಮುಖಂಡರು ಉಪ ತಹಶೀಲ್ದಾರ್ ಶಿಲ್ಪಾ ಅವರಿಗೆ ಮನವಿ ಸಲ್ಲಿಸಿದರು</p></div>

ಹಗರಿಬೊಮ್ಮನಹಳ್ಳಿಯ ತಹಶೀಲ್ದಾರ್ ಕಚೇರಿಯಲ್ಲಿ ವಾಲ್ಮೀಕಿ ಮಹಾಸಭಾದ ತಾಲ್ಲೂಕು ಘಟಕದ ಪದಾಧಿಕಾರಿಗಳು, ಮುಖಂಡರು ಉಪ ತಹಶೀಲ್ದಾರ್ ಶಿಲ್ಪಾ ಅವರಿಗೆ ಮನವಿ ಸಲ್ಲಿಸಿದರು

   

ಹಗರಿಬೊಮ್ಮನಹಳ್ಳಿ: ವಾಲ್ಮೀಕಿ ಸಮುದಾಯದವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಮಾಜಿ ಸಂಸದ ರಮೇಶ್ ಕತ್ತಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ವಾಲ್ಮೀಕಿ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಪವಾಡಿ ಹನುಮಂತಪ್ಪ ಆಗ್ರಹಿಸಿದರು.

ಪಟ್ಟಣದಲ್ಲಿ ಗುರುವಾರ ತಹಶೀಲ್ದಾರ್ ಕಚೇರಿಯ ಎದುರು ನಡೆದ ಧರಣಿಯ ನೇತೃತ್ವ ವಹಿಸಿ ಮಾತನಾಡಿದರು.

ADVERTISEMENT

ವಾಲ್ಮೀಕಿ ಜನಾಂಗವನ್ನು ನಿಂದಿಸಿದ ಅವರಿಗೆ ಸಮಾಜದಿಂದ ಸೂಕ್ತ ಸಮಯದಲ್ಲಿ ಪಾಠ ಕಲಿಸಬೇಕಾದ ಸಂದರ್ಭ ಶೀಘ್ರದಲ್ಲಿಯೇ ಒದಗಿ ಬರುತ್ತದೆ ಎಂದು ಎಚ್ಚರಿಸಿದರು.

ಸರ್ಕಾರ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸದಿದ್ದರೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

ಗೌರವ ಅಧ್ಯಕ್ಷ ಕೆ.ಎಸ್.ಉಡುಚಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಜೆ.ಯೋಗಾನಂದ, ಪುರಸಭೆ ಮಾಜಿ ಅಧ್ಯಕ್ಷರಾದ ಜೋಗಿ ಹನುಮಂತ್ಪ, ಟಿ.ರಾಘವೇಂದ್ರ, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಬಿ.ದೇವೇಂದ್ರಪ್ಪ, ಟಿ.ವೆಂಕೋಬಪ್ಪ, ಡಿಶ್ ಮಂಜುನಾಥ, ಟಿ.ಮಹೇಂದ್ರ, ಸೆರೆಗಾರ ಹುಚ್ಚಪ್ಪ, ಬಂಟ್ರ ಕುಬೇರ, ಕಿಟಕಿ ವಿಶ್ವನಾಥ, ತಳವಾರ ಹನುಮಂತಪ್ಪ, ಕೆ.ಪ್ರಹ್ಲಾದ್, ಹುಲ್ಮನಿ ಮಂಜುನಾಥ, ಟಿ.ಉಮೇಶ್ ಭಾಗವಹಿಸಿದ್ದರು. ವಾಲ್ಮೀಕಿ ವೃತ್ತದಿಂದ ತೆರಳಿ ಉಪ ತಹಶೀಲ್ದಾರ್ ಶಿಲ್ಪಾ ಅವರಿಗೆ ಮನವಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.