ADVERTISEMENT

ವಿಜಯನಗರ| ಬಾಲಕರ ಕುಸ್ತಿ ಪಂದ್ಯಾವಳಿ: ಮೋಹನ್‍ಗೆ ಚಿನ್ನ, ರಾಹುಲ್‍ಗೆ ಬೆಳ್ಳಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 6:02 IST
Last Updated 9 ನವೆಂಬರ್ 2025, 6:02 IST
<div class="paragraphs"><p>ಹೊಸಪೇಟೆ ತಾಲ್ಲೂಕು ಮರಿಯಮ್ಮನಹಳ್ಳಿಯಲ್ಲಿ ಶನಿವಾರ ನಡೆದ ರಾಜ್ಯಮಟ್ಟದ ಶಾಲಾ ಮಕ್ಕಳ ಕುಸ್ತಿ ಪಂದ್ಯಾವಳಿಯ ಒಂದು ರೋಚಕ ಹಣಾಹಣಿ&nbsp; </p></div>

ಹೊಸಪೇಟೆ ತಾಲ್ಲೂಕು ಮರಿಯಮ್ಮನಹಳ್ಳಿಯಲ್ಲಿ ಶನಿವಾರ ನಡೆದ ರಾಜ್ಯಮಟ್ಟದ ಶಾಲಾ ಮಕ್ಕಳ ಕುಸ್ತಿ ಪಂದ್ಯಾವಳಿಯ ಒಂದು ರೋಚಕ ಹಣಾಹಣಿ 

   

ಪ್ರಜಾವಾಣಿ ಚಿತ್ರ

ಮರಿಯಮ್ಮನಹಳ್ಳಿ (ವಿಜಯನಗರ ಜಿಲ್ಲೆ): ಪಟ್ಟಣದ ವಿನಾಯಕ ಪ್ರೌಢಶಾಲೆಯ ಮೈದಾನದಲ್ಲಿ ಶನಿವಾರ ನಡೆದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ 14 ಮತ್ತು 17ವರ್ಷ ವಯೋಮಿತಿಯ ಬಾಲಕ, ಬಾಲಕಿಯರ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ 110 ಕೆ.ಜಿ ವಿಭಾಗದ ‘ಗ್ರೀಕ್ ರೋಮನ್’ ಶೈಲಿಯ ಪಂದ್ಯದಲ್ಲಿ ಬಾಗಲಕೋಟೆಯ ಮೋಹನ್ ಚಿನ್ನ, ಗದಗಿನ ರಾಹುಲ್ ಬೆಳ್ಳಿ ಹಾಗೂ ಬೆಳಗಾವಿಯ ಶ್ರೀರಾಜ್ ಪಾಟೀಲ್ ಕಂಚಿನ ಪದಕ ಗೆದ್ದುಕೊಂಡರು.

ADVERTISEMENT

ಫಲಿತಾಂಶ–ವಿವಿಧ ವಿಭಾಗಗಳಲ್ಲಿ ಫೈನಲ್‌ ತಲುಪಿದವರು: 45 ಕೆ.ಜಿ ವಿಭಾಗ–ಶಿವಾನಂದ (ವಿಜಯಪುರ), ಕಾಸಿಂ (ಬೆಳಗಾವಿ), 48ಕೆಜಿ– ಮಾರೆಪ್ಪ ಕೂಡಗಿ (ಧಾರವಾಡ), ಎಂ.ಡಿ.ಜಾವೇದ್ (ಶಿರಸಿ), 51ಕೆಜಿ– ಶಿವಪ್ಪ (ವಿಜಯಪುರ), ಸಂದೀಪ್ (ಧಾರವಾಡ), 55ಕೆಜಿ– ಮುತ್ತುರಾಜ್ (ದಾವಣಗೆರೆ), ರಾಬಿನ್ (ಶಿರಸಿ), 60ಕೆಜಿ– ಆಕಾಶ್ (ಬಾಗಲಕೋಟೆ), ದಾದಾಪೀರ್ (ಧಾರವಾಡ), 65ಕೆಜಿ– ಅರ್ಷದ್ (ಚಿಕ್ಕೋಡಿ), ತಿಮ್ಮೇಶ್ (ದಾವಣಗೆರೆ), 71ಕೆಜಿ– ಭರಮನ್ (ಬಾಗಲಕೋಟೆ), ವಿನಯ್ (ಬೆಳಗಾವಿ), 80ಕೆಜಿ– ಜೀವನ್ (ದಾವಣಗೆರೆ), ಶಿವಾನಂದ (ಬಾಗಲಕೋಟೆ), 92ಕೆಜಿ– ಬಾಲೇಶ್ (ಬೆಳಗಾವಿ), ಹನುಮಂತ ವಿಠ್ಠಲ್ (ದಾವಣಗೆರೆ).

17 ವಯೋಮಿತಿಯ ಬಾಲಕರ ‘ಫ್ರೀ ಸ್ಟೈಲ್’ ಕುಸ್ತಿ– ಫೈನಲ್ ತಲುಪಿದವರು: 45ಕೆಜಿ ವಿಭಾಗ– ಮಾದೇಶ್ (ಧಾರವಾಡ), ಮಲ್ಲಿಕ್ ರೆಹಾನ್ (ಬೆಳಗಾವಿ), 48ಕೆಜಿ–ಶಂಕರ್ ಪಾಟೀಲ್ (ಶಿರಸಿ), ಆನಂದ (ಬಾಗಲಕೋಟೆ), 51ಕೆಜಿ– ಮೋಹನ್ (ದಾವಣಗೆರೆ), ರಮೇಶ್ (ದಕ್ಷಿಣ ಕನ್ನಡ), 55ಕೆಜಿ– ಮುತ್ತು (ಬಾಗಲಕೋಟೆ), ಸಂಜಯ್ (ದಾವಣಗೆರೆ), 60ಕೆಜಿ– ರಫೀಕ್ (ದಾವಣಗೆರೆ), ಬೆಮನ್ (ಧಾರವಾಡ), 65ಕೆಜಿ– ಸತ್ಯರಾಜ (ದಾವಣಗೆರೆ), ಶಿವಾಜಿ (ಧಾರವಾಡ), 71ಕೆಜಿ– ಅಭಿಷೇಕ್ (ಬೀದರ್), ಅಲ್ತಾಫ್ (ವಿಜಯಪುರ), 110ಕೆಜಿ– ಮಹಾದೇವ್(ಕೋಲಾರ), ಪ್ರದೀಪ್ (ಬೆಂಗಳೂರು ದಕ್ಷಿಣ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.