ಪ್ರಜಾವಾಣಿ ವಾರ್ತೆ
ಹೊಸಪೇಟೆ (ವಿಜಯನಗರ): ನಗರದ ಕರ್ನಾಟಕ ಕಲಾಭಿಮಾನಿ ಸಂಘದ ವತಿಯಿಂದ ನಿಡ್ಲೆಯ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಕಲಾವಿದರಿಂದ ‘ದಕ್ಷಾಧ್ವರ ಗಿರಿಜಾಕಲ್ಯಾಣ’ ಯಕ್ಷಗಾನ ಆ.10ರಂದು ಸಂಜೆ 7ರಿಂದ ವಿಜಯನಗರ ಸ್ವತಂತ್ರ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆಯಲಿದೆ.
ಹಿಮ್ಮೇಳದಲ್ಲಿ ಭಾಗವತರಾಗಿ ಕರುಣಾಕರ ಶೆಟ್ಟಿಗಾರ್ ಕಾಶಿಪಟ್ಣ, ಸುಧೀರ್ ಪಾಣಾಜೆ, ಚೆಂಡೆ, ಮದ್ದಳೆಯಲ್ಲಿ ಶ್ರೀಧರ್ ಪಡ್ರೆ, ಚಂದ್ರಶೇಖರ ಸರಪಾಡಿ, ಹಾಸ್ಯದಲ್ಲಿ ಮವ್ವಾರು ಬಾಲಕೃಷ್ಣ ಮಣಿಯಾಣಿ, ಸ್ತ್ರೀವೇಷದಲ್ಲಿ ಮುರಳೀಧರ ಕನ್ನಡಿಕಟ್ಟೆ, ಶರತ್ ಶೆಟ್ಟಿ ತೀರ್ಥಹಳ್ಳಿ, ಬಣ್ಣದ ವೇಷದಲ್ಲಿ ಮುಖೇಶ್ ದೇವಧರ್ ನಿಡ್ಲೆ, ಮುಮ್ಮೇಳದಲ್ಲಿ ನಿಡ್ಲೆ ಗೋವಿಂದ ಭಟ್, ಗಣೇಶ್ ಚಂದ್ರಮಂಡಲ, ಪದ್ಮನಾಭ ಶೆಟ್ಟಿ ಕನ್ನಡಿಕಟ್ಟೆ, ಹರಿಶ್ಚಂದ್ರ ಆಚಾರ್ಯ ಚಾರ್ಮಾಡಿ, ಪ್ರಸಾದ್ ಸವಣೂರು, ಗೌತಮ್ ಶೆಟ್ಟಿ ಬೆಳ್ಳಾರೆ, ಅರಳ ಗಣೇಶ್ ಶೆಟ್ಟಿ, ನವೀನ್ ಮುಂಡಾಜೆ ಅಕ್ಷಯ್ ಭಟ್ ಮೂಡುಬಿದಿರೆ, ಸತೀಶ್ ನೀರ್ಕರೆ, ಅಕ್ಷಯ್ ಮಿಜಾರು ಪಾಲ್ಗೊಳ್ಳುವರು.
ಪ್ರವೇಶ ಉಚಿತ. ಮಾಹಿತಿಗೆ 9448997450, 9342681181 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.