ADVERTISEMENT

ಅಣಕು ಸಂಸತ್ತು; ವಿದ್ಯಾರ್ಥಿಗಳ ಗತ್ತು

​ಪ್ರಜಾವಾಣಿ ವಾರ್ತೆ
Published 28 ಜನವರಿ 2012, 11:45 IST
Last Updated 28 ಜನವರಿ 2012, 11:45 IST

ಆಲಮಟ್ಟಿ/ವಿಜಾಪುರ: ಅಲ್ಲಿ ಸಭಾಧ್ಯಕ್ಷರು, ಸಚಿವರು, ಸಂಸತ್ ಸದಸ್ಯರು ಇದ್ದರು. ವಿರೋಧ ಪಕ್ಷದ ಸದಸ್ಯರ ಅಬ್ಬರವೂ ಹೆಚ್ಚಾಗಿತ್ತು. ಗದ್ದಲವೂ ಜೋರಾಗಿತ್ತು. ಧರಣಿ, ಸಭಾತ್ಯಾಗ ನಡೆದವು. ಎರಡು ಬಾರಿ ಸದನವನ್ನೂ ಮುಂದೂಡಲಾಯಿತು...

ಇದು ವಂದಾಲ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆದ ಅಣಕು ಸಂಸತ್‌ನ ನೋಟ.
ನೂತನ ಸಭಾಧ್ಯಕ್ಷರನ್ನು ಆಯ್ಕೆ ಪ್ರಕ್ರಿಯೆಯೊಂದಿಗೆ ಸದನ  ಕಾರ್ಯಕಲಾಪ ಪ್ರಾರಂಭಿಸಿತು. ಪ್ರಸ್ತುತ ರಾಜಕಾರಣಿಯನ್ನು ಮೀರಿಸುವಂತೆ ವಿದ್ಯಾರ್ಥಿಗಳು ಚರ್ಚೆ ನಡೆಸಿದರು. ಎಸ್.ಬಿ. ತಿಮ್ಮೋಪೂರ ಮಾರ್ಗದರ್ಶನದಲ್ಲಿ ಮೂಡಿಬಂದ ಈ ಅಣಕು ಸಂಸತ್ತು ಎಲ್ಲರನ್ನೂ ಆಕರ್ಷಿಸಿತು.

ವಂದಾಲ ಶಾಲೆಯ ನೇತ್ರಾ ಈಳಗೇರ ಸಭಾಧ್ಯಕ್ಷರಾಗಿ, ವಿರೋಧಪಕ್ಷದ ನಾಯಕಿಯಾಗಿ ಗಾಯತ್ರಿ ಗಿಡಜಾಡರ, ಬನದೇವಿ ಢವಳಗಿ (ಕೃಷಿ), ಶ್ರುತಿ ಕೊಂತಿಕಲ್ಲ (ಶಿಕ್ಷಣ), ಶಂಕರಲಿಂಗ ಪತ್ತಾರ (ಆರೋಗ್ಯ), ಪ್ರಶಾಂತ ತಿಮ್ಮೋಪುರ (ಸಾರಿಗೆ) ಸಚಿವರಾಗಿದ್ದರು. ಭುವನೇಶ್ವರಿ ಹಿರೇಮಠ, ಕವಿತಾ ಕೊಳ್ಳಿ,  ಶ್ರಿಶೈಲ ಕಮತಗಿ, ಮೇಘಾ ಗುಂಗಿ, ಸುರೇಖಾ ಮನಗೂಳಿ, ಗೀತಾ ಕುಂಬಾರ, ಸಂಗಮೇಶ ಹತ್ತರಕಿಹಾಳ ಸಂಸದರಾಗಿ, ಸಭಾಧ್ಯಕ್ಷೆಯ ಸಹಾಯಕರಾಗಿ ರೇಣುಕಾ ಗಂಜ್ಯಾಳ, ಗೀತಾ ಕಂಬಳಿ ಇದ್ದರು.

ವಿಜಾಪುರ
`ನಮ್ಮ ದೇಶದ ಅಭಿವೃದ್ಧಿಯು ರಾಜಕಾರಣಿಗಳ ಕೈಯಲ್ಲಿದೆ. ಅವರು ಮನಸ್ಸು ಮಾಡಿ ನಿಸ್ವಾರ್ಥದಿಂದ ದುಡಿದಾಗ ಸಮಾಜದ ಏಳ್ಗೆಯಾಗುವುದು~ ಎಂದು ಆ ಶಾಲೆಯಲ್ಲಿ ನಡೆದ ಅಣುಕು ಸಂಸತ್ತಿನಲ್ಲಿ ರಾಷ್ಟ್ರಪತಿ ಹುದ್ದೆ ಅಲಂಕರಿಸಿದ್ದ ಪ್ರಿಯಾಂಕಾ ಶ. ಚಿತ್ತಾಪೂರ ಹೇಳಿದರು.

ವಿಜಾಪುರ ದರ್ಗಾದ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿಯ ಪ್ರಾಥಮಿಕ ಶಾಲೆ ನಂ. 48ರಲ್ಲಿ ನಡೆದ ಮಕ್ಕಳ ಅಣಕು ಸಂಸತ್‌ನಲ್ಲಿ ವಿವೇಕಾನಂದ ಶಾಂತಯ್ಯ ಹಿರೇಮಠ ಮಾನವ ಸಂಪನ್ಮೂಲ ಮಂತ್ರಿಯಾಗಿದ್ದ.  ವಿರೋಧ ಪಕ್ಷದ ನಾಯಕಿಯಾಗಿ ಸುಷ್ಮಾ ಹಳ್ಳಿ, ಸಂದೀಪ ಬೆಂಕಿ, ಶ್ರಿಶೈಲ ಪೂಜಾರಿ, ಯಮನಪ್ಪ ನಡುವಿನಮನಿ, ಸಭಾಧ್ಯಕ್ಷರಾಗಿ ಸಲ್ಮಾಬಾನು ದಳವಾಯಿ , ಪ್ರಿಯಾಂಕಾ ತಳಕಡೆ ಹೀಗೆ ಸಮೂಹ ಸಂಪನ್ಮೂಲ ಕೇಂದ್ರ 25ರ ಎಲ್ಲ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಶಿಕ್ಷಕರಾದ ವಿ.ಬಿ. ಶೆಟಗಾರ, ರವಿ ನರಗುಂದ, ಮೆಹತಾಬ ಕಾಗವಾಡ ಕಾರ್ಯಕ್ರಮ ಸಂಘಟಿಸಿದ್ದರು. ಪಿ.ವಿ. ಜೋಶಿ, ಎಸ್.ಆರ್. ತಂಗಡಿ, ಜಗತಾಪ , ವೀಣಾ ಪಾಟೀಲ,  ಸಾವಂತ  ಮುಂತಾದವರು ಉಪಸ್ಥಿತರಿದ್ದರು.
ನಂತರ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ವೈ. ರತ್ತಾಳ ವಹಿಸಿದ್ದರು. ಮುಖ್ಯ ಶಿಕ್ಷಕ ಎಸ್.ಎಸ್.
ಬಡಿಗೇರ ಮುಖ್ಯ ಅತಿಥಿಯಾಗಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.