ಬಸವನಬಾಗೇವಾಡಿ: ಅಯ್ಯಪ್ಪ ಸ್ವಾಮಿಯ 18ನೇ ವರ್ಷದ ಮಹಾ ಪೂಜೆ ಅಂಗವಾಗಿ ಮಕರಜ್ಯೋತಿ ಅಯ್ಯಪ್ಪ ಸೇವಾ ಸಮಿತಿಯು ಶುಕ್ರ ವಾರ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವಿಜಾಪುರ ರಸ್ತೆಯ ಎಪಿಎಂಸಿ ಹತ್ತಿ ರದ ಅಯ್ಯಪ್ಪ ಸ್ವಾಮಿ ದೇವಾಲಯ ದಲ್ಲಿ ಬೆಳಿಗ್ಗೆ ಗಣಹೋಮ ಪೂಜೆ ಮತ್ತು ದೀಕ್ಷಾ ಕಾರ್ಯಕ್ರಮ ಜರು ಗಿತು. ನಂತರ ಬಸವೇಶ್ವರ ದೇವಸ್ಥಾನ ದಿಂದ ಆರಂಭವಾದ ಅಯ್ಯಪ್ಪ ಸ್ವಾಮಿಯ ಪಲ್ಲಕಿ ಉತ್ಸವವು ಕುಂಭ ಹೊತ್ತ ಸುಮಂಗಲೆಯರು ಹಾಗೂ ವಿವಿಧ ವಾದ್ಯಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ತೆರಳಿತು.
ಪಲ್ಲಕಿ ಉತ್ಸವ ದೇವಾಲಯಕ್ಕೆ ಆಗಮಿಸಿದ ನಂತರ ಅಯ್ಯಪ್ಪ ಸ್ವಾಮಿಗೆ ಮಹಾಪೂಜೆ, ಅಗ್ನಿ ಪೂಜೆ ನೆರವೇರಿತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾ ಗಿತ್ತು. ಮಹಾಪೂಜೆಯ ಅಂಗವಾಗಿ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾ ಗಿತ್ತು.
ಪಲ್ಲಕಿ ಉತ್ಸವದಲ್ಲಿ ಸಿದ್ದು ಗುರುಸ್ವಾಮಿ, ಅರಳದಿನ್ನಿಯ ಗ್ಯಾನಪ್ಪ ಗುರುಸ್ವಾಮಿ, ಯಲಗೂರದ ಮಹಾ ದೇವ ಗುರುಸ್ವಾಮಿ, ಆಲಮಟ್ಟಿಯ ಯಲಗೂರೇಶ ಗುರುಸ್ವಾಮಿ, ವಿಜಾ ಪುರದ ಗುರುಸ್ವಾಮಿ, ರಮೇಶ ಗುರು ಸ್ವಾಮಿ, ಮಹೇಶ ಗುರುಸ್ವಾಮಿ, ಮಲ್ಲು ಪಡಶೆಟ್ಟಿ, ಶಿವು ಮಸಬಿನಾಳ, ಚಂದ್ರು ಬೂದಿಹಾಳ, ಈರಣ್ಣ ಚಿಕ್ಕೊಂಡ, ಶರಣು ಬಸ್ತಾಳ, ಮುದುಕು ಗುಳೇದ, ಜಟ್ಟೆಪ್ಪ ಗಂಗೂರ, ಅಮೋಘ ಬಡಿ ಗೇರ, ಮಹಾಂತೇಶ ಹಡಪದ ಸೇರಿ ದಂತೆ ಮುದೋಳ, ಮುದ್ದೇಬಿಹಾಳ, ವಿಜಾಪುರ ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು, ಭಕ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.