ADVERTISEMENT

ಆಲಮಟ್ಟಿ: ದಂಡಿಯಾತ್ರೆ ಕಲಾಕೃತಿಗಳ ಅನಾವರಣ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 12:00 IST
Last Updated 27 ಮಾರ್ಚ್ 2018, 12:00 IST
ಆಲಮಟ್ಟಿಯ ಲಾಲಬಹದ್ದೂರ್‌ ಶಾಸ್ತ್ರೀ ಸಾಗರ ಅಣೆಕಟ್ಟಿನ ವೃತ್ತದಲ್ಲಿ ನಿರ್ಮಿಸಲಾಗಿರುವ ಶಿಲ್ಪಕಲಾಕೃತಿಗಳನ್ನು ಸಚಿವ ಎಂ.ಬಿ.ಪಾಟೀಲ ಭಾನುವಾರ ಅನಾವರಣಗೊಳಿಸಿದರು. ಶಾಸಕ ಶಿವಾನಂದ ಪಾಟೀಲ ಇದ್ದಾರೆ
ಆಲಮಟ್ಟಿಯ ಲಾಲಬಹದ್ದೂರ್‌ ಶಾಸ್ತ್ರೀ ಸಾಗರ ಅಣೆಕಟ್ಟಿನ ವೃತ್ತದಲ್ಲಿ ನಿರ್ಮಿಸಲಾಗಿರುವ ಶಿಲ್ಪಕಲಾಕೃತಿಗಳನ್ನು ಸಚಿವ ಎಂ.ಬಿ.ಪಾಟೀಲ ಭಾನುವಾರ ಅನಾವರಣಗೊಳಿಸಿದರು. ಶಾಸಕ ಶಿವಾನಂದ ಪಾಟೀಲ ಇದ್ದಾರೆ   

ವಿಜಯಪುರ: ‘ಸ್ವಾತಂತ್ರ್ಯಕ್ಕಾಗಿ ಮಹಾತ್ಮಗಾಂಧಿ ನಡೆಸಿದ ಹೋರಾಟಗಳಲ್ಲಿ ದಂಡಿಯಾತ್ರೆಯೂ ಪ್ರಮುಖವಾಗಿದ್ದು, ಇದರಲ್ಲಿ ಭಾಗಿಯಾದವರ ಶಿಲ್ಪ ಕಲಾಕೃತಿಗಳನ್ನು ಪ್ರತಿಷ್ಠಾಪಿಸಿರುವುದು ಆಲಮಟ್ಟಿಯ ಸೊಬಗನ್ನು ಹೆಚ್ಚಿಸಿದೆ’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

ಆಲಮಟ್ಟಿಯ ಲಾಲಬಹದ್ದೂರ್‌ ಶಾಸ್ತ್ರೀ ಸಾಗರ ಅಣೆಕಟ್ಟಿನ ವೃತ್ತದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ಅನುದಾನದಡಿ ₹ 25 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಶಿಲ್ಪಕಲಾಕೃತಿಗಳನ್ನು ಭಾನುವಾರ ಸಚಿವರು ಅನಾವರಣಗೊಳಿಸಿದರು.

‘ಮಹಾತ್ಮ ಗಾಂಧೀಜಿ ಸೇರಿದಂತೆ ಸ್ವಾತಂತ್ರ್ಯ ಚಳವಳಿಯ ದಂಡಿಯಾತ್ರೆಗಳ ಶಿಲ್ಪಕಲಾಕೃತಿಗಳನ್ನು ಆಲಮಟ್ಟಿಯಲ್ಲಿ ನಿರ್ಮಿಸಿರುವುದು ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಕ್ಕಂತಾಗಿದೆ. ಈ ಕಲಾಕೃತಿಯು ಪ್ರವಾಸಕ್ಕೆ ಆಗಮಿಸುವ ವಿದ್ಯಾರ್ಥಿಗಳಿಗೆ ಹಾಗೂ ಪ್ರವಾಸಿಗರಿಗೆ ಉಪ್ಪಿನ ಸತ್ಯಾಗ್ರಹದ ಚಳವಳಿಯ ನೆನಪನ್ನು ಮಾಡಿಕೊಡಲಿದೆ’ ಎಂದು ಎಂ.ಬಿ.ಪಾಟೀಲ ಹೇಳಿದರು.

ADVERTISEMENT

‘ಬ್ರಿಟಿಷರು ಉಪ್ಪಿನ ಮೇಲೆ ವಿಧಿಸಿದ ಅಧಿಕ ತೆರಿಗೆ ವಿರೋಧಿಸಿ ಮಹಾತ್ಮ ಗಾಂಧೀಜಿ ನಡೆಸಿದ ಸತ್ಯಾಗ್ರಹದ ಕಲಾಕೃತಿ ನೋಡಲು ನಾವು ದೇಶದ ವಿವಿಧ ಭಾಗಗಳಿಗೆ ತೆರಳಬೇಕಿತ್ತು. ಇಲ್ಲಿ ಕಲಾಕೃತಿ ನಿರ್ಮಿಸಬೇಕು ಎಂಬುದು ಬಹು ದಿನಗಳ ಬೇಡಿಕೆಯಾಗಿತ್ತು. ಇದೀಗ ಈಡೇರಿದೆ’ ಎಂದರು.

ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಶಿವಾನಂದ ಪಾಟೀಲ, ಕೆಬಿಜೆಎನ್‌ಎಲ್‌ ಮುಖ್ಯ ಎಂಜಿನಿಯರ್‌ ಎಸ್.ಎಚ್.ಮಂಜಪ್ಪ, ಇಇ ಎಂ.ಎಸ್.ಇನಾಮದಾರ, ಎಇಇ ಎಸ್.ಬಿ.ಚಿತ್ತವಾಡಗಿ, ಜೆಇ ನರೇಂದ್ರ ಎಚ್.ಸಿ, ಉಪ ಅರಣ್ಯ ಸಂರಕ್ಷಾಣಾಧಿಕಾರಿ ನಾಯಕ, ಅರಣ್ಯ ಅಧಿಕಾರಿ ಮಹೇಶ ಪಾಟೀಲ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.