ADVERTISEMENT

ಉದ್ಯೋಗ ಆಧಾರಿತ ತರಬೇತಿ ಅಗತ್ಯ

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 6:30 IST
Last Updated 18 ಜುಲೈ 2017, 6:30 IST

ವಿಜಯಪುರ: ‘ಯುವ ಸಮುದಾಯ ಉದ್ಯೋಗಾಧಾರಿತ ಕೌಶಲ ತರಬೇತಿ ಪಡೆದು, ಉದ್ಯೋಗವಂತರಾಗಬೇಕು’ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ನೀಲಮ್ಮ ಮೇಟಿ ಸಲಹೆ ನೀಡಿದರು. ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ/ಪಂಗಡದವರಿಗೆ ಉದ್ಯೋಗ ಆಧಾರಿತ ಕೌಶಲ ಉಚಿತ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಪ್ರತಿಯೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವುದು ಅಸಾಧ್ಯ. ಹೀಗಾಗಿ ಖಾಸಗಿ ಕಂಪೆನಿಗಳಲ್ಲಿ ವಿಪುಲ ಅವಕಾಶಗಳಿದ್ದು ಬಳಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
ನ್ಯಾಷನಲ್ ಯೂತ್ ಅವಾರ್ಡ್ಸ್‌ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಜಾವೀದ ಜಮಾದಾರ ಮಾತನಾಡಿ ‘ಯುವಶಕ್ತಿ ವ್ಯರ್ಥವಾಗದಂತೆ ನಿಗಾ ವಹಿಸಬೇಕು. ಸ್ವಯಂ ಉದ್ಯೋಗದ ತರಬೇತಿ ಪಡೆದು ಯುವಕರು ಉದ್ಯೋಗಾವಕಾಶ ಕಲ್ಪಿಸಿಕೊಳ್ಳುವ ಮೂಲಕ ಶ್ರಮಜೀವಿಗಳಾಗಬೇಕು’ ಎಂದು ಸಲಹೆ ನೀಡಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಎಸ್.ಜಿ.ಲೋಣಿ ಪ್ರಾಸ್ತಾವಿಕವಾಗಿ ಮಾತ ನಾಡಿದರು.  ಕೌಶಲ ತರಬೇತಿಯ ಪ್ರಾದೇಶಿಕ ವ್ಯವಸ್ಥಾಪಕ ಅರುಣರೆಡ್ಡಿ ಸ್ವಾಗತಿಸಿದರು. ಕಿಶನ್ ಸಿಂಗ್‌ ನಿರೂಪಿಸಿ ದರು. ಸೈಕ್ಲಿಂಗ್ ತರಬೇತುದಾರರಾದ ಅಲ್ಕಾ ಫಡತರೆ ವಂದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.