ADVERTISEMENT

ಕನಕದಾಸ ಜಯಂತಿ: ಅದ್ಧೂರಿ ಆಚರಣೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 9:34 IST
Last Updated 25 ಅಕ್ಟೋಬರ್ 2017, 9:34 IST

ಬಸವನಬಾಗೇವಾಡಿ: ‘ಕನದಾಸ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡುವ ಕುರಿತು ಇಂದಿನಿಂದಲೇ ಸಿದ್ಧತೆಗಳನ್ನು ಆರಂಭಿಸಬೇಕು’ ಎಂದು ಕುರಬರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಂಗಮೇಶ ಓಲೇಕಾರ ಹೇಳಿದರು. ಪಟ್ಟಣದ ಈರಕಾರ ಮುತ್ಯಾ ದೇವಸ್ಥಾನದಲ್ಲಿ ಭಾನುವಾರ ಕನಕದಾಸರ ಜಯಂತಿ ಆಚರಣೆ ಮಾಡುವ ಕುರಿತು ಕರೆಯಲಾಗಿದ್ದ ತಾಲ್ಲೂಕಿನ ಹಾಲುಮತ ಸಮಾಜದವರ ಸಭೆಯಲ್ಲಿ ಅವರು ಮಾತನಾಡಿದರು.

‘ನ.6 ರಂದು ಆಚರಣೆ ಮಾಡ ಲಿರುವ ಕನದಾಸ ಜಯಂತಿ ದಿನದಂದು ತಾಲ್ಲೂಕಿನ ಡೊಳ್ಳಿನ ಸಂಘದವರು ಹಾಲುಮತ ಸಮಾಜದ ಸಂಕೇತವಾದ ಡೊಳ್ಳಿನ ವಾಲಗದೊಂದಿಗೆ ಭಾಗವಹಿಸುವ ಮೂಲಕ ಕನಕದಾಸರ ಭಾವಚಿತ್ರದ ಮೆರವಣಿಗೆಯ ಮರುಗನ್ನು ಹೆಚ್ಚಿಸಬೇಕು. ಕುಂಭಮೇಳ ಸೇರಿದಂತೆ ವಿವಿಧ ವಾದ್ಯ ತಂಡಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಹಾಲುಮತ ಸಮಾಜದ ಮುಖಂಡರಾದ ಬೀರಪ್ಪ ಸಾಸನೂರ, ತಾನಾಜಿ ನಾಗರಾಳ , ಸಂಗಪ್ಪ ವಾಡೇದ, ಬಾಲಚಂದ್ರ ಮಾಳಗೊಂಡ ,ಬಿ.ಟಿ.ಗೌಡರ, ವಕೀಲ ಕೆ.ವೈ.ಬೀರಲದಿನ್ನಿ, ಪರಶುರಾಮ ಪೂಜಾರಿ, ಎಲ್.ಬಿ.ಕಂದಗಲ್ಲ, ರಾಜು ಹುಡೇದ, ಮುತ್ತು ಉಕ್ಕಲಿ, ಮಾಳು ಪೂಜಾರಿ, ಸಂಗಮೇಶ ವಾಡೇದ, ಮಹೇಶ ಹಿರೇಕುರಬರ, ವಿಕಾಸ ಜೋಗಿ, ಸುಭಾಸ ಬೂದಗೋಳ, ಶ್ರೀಶೈಲ ಯರನಾಳ, ಸಿದ್ದು ಸಾಸನೂರ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.