ADVERTISEMENT

ಕಾಯಕ ತತ್ವದಡಿ ಬದುಕಲು ಸಲಹೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 8:35 IST
Last Updated 23 ಫೆಬ್ರುವರಿ 2012, 8:35 IST

ತಾಳಿಕೋಟೆ: `ಸ್ವಾರ್ಥ ಬಿಡಿ, ಆಸೆ ಬಿಡಿ, ನಾಡಿಗಾಗಿ ಪ್ರಾಣವಿಡಿ, ಕಾಯಕದಿಂದ ಜೀವನ, ಕಾಯಕದಿಂದ ದಾಸೋಹ ಎಂಬ ತತ್ವದಡಿ ವಿದ್ಯಾರ್ಥಿಗಳು ಜೀವನ ಬೆಳೆಸಿಕೊಳ್ಳಬೇಕು~ ಎಂದು ದೇವರ ಹಿಪ್ಪರಗಿ ಶಾಸಕ ಎ.ಎಸ್.ಪಾಟೀಲ (ನಡಹಳ್ಳಿ) ಹೇಳಿದರು ಅವರು ಸ್ಥಳೀಯ ಎಸ್.ಕೆ. ಕಾಲೇಜಿನಲ್ಲಿ  ಬುಧವಾರ ಪ್ರಾರಂಭಗೊಂಡ ತಾಲ್ಲೂಕು ಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪಕರ ಹಾಗೂ ಚಿಂತನಾ ದಿನಾಚರಣೆ ಮತ್ತು ತ್ಲ್ಲಾಲೂಕು ಮಟ್ಟದ ಮಕ್ಕಳ ಮೇಳ (ರ‌್ಯಾಲಿ)ಯನ್ನು ಉದ್ಘಾಟಿಸಿ ಮಾತನಾಡಿದರು.

ನಾನು ನನಗಾಗಿ ಅಲ್ಲ, ಸಮಾಜ ಕ್ಕಾಗಿ, ದೇಶಕ್ಕಾಗಿ ಎಂಬ ಸಂಕಲ್ಪ ದೊಂದಿಗೆ ಮುನ್ನಡೆಯಿರಿ, ಸುಂದರ ನಾಡು ಕಟ್ಟುವ ಉತ್ತಮ ಭವಿಷ್ಯ ಕಟ್ಟಿಕೊಳ್ಳುವ ಸುಂದರ ಕನಸುಗಳನ್ನು ಹೊಂದಿರಿ ಎಂದು ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಹಂಗಾಮಿ ಅಧ್ಯಕ್ಷ ಹಾಗೂ ತಾಲ್ಲೂಕು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಅಧ್ಯಕ್ಷ ಗಂಗಾಧರರಾವ್ ನಾಡಗೌಡ (ಮುನ್ನಾಧನಿ) ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಎಂಬುದು ನಿಸ್ವಾರ್ಥ ಸಂಸ್ಥೆ;  ಜಾತಿ, ಮತ, ದೇಶಗಳೆಂಬ ಗಡಿ ಮೀರಿದ್ದು. ಇದು ದೇಶದ ಐಕ್ಯತೆಯನ್ನು ಹೆಚ್ಚಿಸುವುದಾ ಗಿದೆ. ಕಾರ್ಯಕ್ರಮ ಸಂಘಟಿಸಲು ನೆರವಾದವರ ಕಾರ್ಯವನ್ನು ಕೊಂಡಾಡಿದರು.

ಮುಖ್ಯ ಅತಿಥಿಗಳಾಗಿದ್ದ ವಿಜಾಪುರ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಎನ್. ಹಕೀಂ, ದೇಶಕ್ಕಾಗಿ ಜನತೆಗಾಗಿ ಸೇವೆ ಸಲ್ಲಿಸಿ, ಪರೋಪಕಾರ, ಶ್ರದ್ದೆ ಅಳವಡಿಸಿಕೊಳ್ಳಿ ಎಂದರು.

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ನ ವಿಜಾಪುರ ಗ್ರಾಮಿಣ ಕಾರ್ಯದರ್ಶಿ ಪರಶುರಾಮ ಕುಂಬಾರ ಬರೆದ `ನೆನಪಿನಂಗಳ..~ ಪುಸ್ತಕ ಬಿಡುಗಡೆ ಮಾಡಿದ ಬೆಂಗಳೂರಿನ ರಾಜ್ಯ ಸಂಪನ್ಮೂಲ ತರಬೇತಿದಾರ ಬಿ.ಎಸ್. ನರಗುಂದ ಹಾಗೂ ಸ್ಥಳೀಯ ಘಟಕದ ಉಪಾಧ್ಯಕ್ಷ ಬಿ.ಎಸ್.ಪಾಟೀಲ ಯಾಳಗಿ ಮಾತನಾಡಿದರು.
ಸಾನಿಧ್ಯ ವಹಿಸಿದ್ದ ಖಾಸ್ಗತ ಶ್ರಿಗಳು ಆಶೀರ್ವಚನ ನೀಡಿದರು.

ವೇದಿಕೆಯಲ್ಲಿ ವೀ.ವಿ. ಸಂಘದ ಅಧ್ಯಕ್ಷ ಐ.ಬಿ. ಬಿಳೇಭಾವಿ, ಕಸಾಪ ತ್ಲ್ಲಾಲೂಕು ಘಟಕದ ಅಧ್ಯಕ್ಷೆ ಶಾಂತಾಬಾಯಿ ನೂಲೀಕರ,  ಎಸ್.ವಿ. ಹೆಬಸೂರ, ಆರ್.ಎಸ್. ಪಾಟೀಲ (ಕೂಚಬಾಳ),  ಎಸ್.ಕೆ. ಕಾಲೇಜಿನ ಅಧ್ಯಕ್ಷ ವಿ.ಸಿ. ಹಿರೇಮಠ (ಹಂಪಿ ಮುತ್ಯಾ), ಶಿಕ್ಷಣಾಧಿಕಾರಿ ಎನ್.ಎಚ್. ನಾಗೂರ, ಡಿ.ಬಿ. ವಡವಡಗಿ, ದೈಹಿಕ ಶಿಕ್ಷಣಾಧಿಕಾರಿ ಎಸ್.ಬಿ. ಚಲವಾದಿ, ಪ್ರಾಚಾರ್ಯ ಡಿ.ಎಸ್. ಹತಗುಂದಿ, ಪುರಸಭೆ ಅಧ್ಯಕ್ಷ ಎಂ.ಕೆ.ಚೋರಗಸ್ತಿ, ಬಾಬು ಕಾರಜೊಳ, ಕಾಶಿನಾಥ ಮುರಾಳ, ಮೌನೇಶ ಪತ್ತಾರ, ಬಿ.ಕೆ. ಯಡ್ರಾಮಿ, ಎಸ್.ಎಸ್.ಗಡೇದ, ಎಂ.ಜಿ. ಪಾಟೀಲ, ಸಿದ್ಧನಗೌಡ ಪಾಟೀಲ, ಎಸ್.ಎಸ್. ಬೊಮ್ಮನಳ್ಳಿ, ಡಿ.ಕೆ. ಯಾದವಾಡ , ಪಿ.ಎಸ್. ಕುಂಬಾರ,  ಮೊದಲಾದವರಿದ್ದರು.

ಕಾರ್ಯದರ್ಶಿ ಜಗದೀಶ ಬೋಳಸೂರ ಮಾತನಾಡಿದರು. ಶ್ರಿಕಾಂತ ಪತ್ತಾರ ಸ್ವಾಗತಿಸಿದರು. ಅಶೋಕ ಹಂಚಲಿ ನಿರೂಪಿಸಿದರು. ಪ್ರೊ. ಎಸ್.ಎಸ್. ಹೂಗಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.